ತಿರುಪತಿ ದೇವಾಲಯವನ್ನು ವಶಕ್ಕೆ ಪಡೆದುಕೊಳ್ಳಲು ಕೇಂದ್ರದ ಪಿತೂರಿ: ಚಂದ್ರಬಾಬು ನಾಯ್ಡು

ಕೇಂದ್ರ ಸರ್ಕಾರ ತಿರುಪತಿ-ತಿರುಮಲ ದೇವಾಲಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸಂಚು ರೂಪಿಸುತ್ತಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ...
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
ಚಿತ್ತೂರು: ಕೇಂದ್ರ ಸರ್ಕಾರ ತಿರುಪತಿ-ತಿರುಮಲ ದೇವಾಲಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸಂಚು ರೂಪಿಸುತ್ತಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಚಿತ್ತೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನವ ನಿರ್ಮಾಣ ದೀಕ್ಷೆಯ ಆರನೇ ದಿನ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಸಂಚು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ತಿರುಮಲ ದೇವಾಸ್ಥಾನದ ವಿರುದ್ಧ ನಡೆಸುವ ಯಾವುದೇ ಸಂಚು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಕೇಂದ್ರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಅವರ ಈ ಕಲ್ಪನೆ ನಿಜವಾಗಲೂ ನಾವು ಬಿಡುವುದಿಲ್ಲ, 2003 ರಲ್ಲಿ ನಾನು ಉಗ್ರವಾದಿಗಳ ದಾಳಿಗೊಳಗಾಗಿದ್ದೆ, ಆದರೆ ಬಾಲಾಜಿ ಕೃಪೆಯಿಂದ ನಾನು ಪಾರಾದೆ. ಯಾವುದೇ ಕಾರಣಕ್ಕೂ ದೇವಾಲಯದ ಪಾವಿತ್ರ್ಯತೆ ಕಳೆದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ,.
ಇನ್ನೂ ಆಂಧ್ರ ಪ್ರದೇಶದ ವಿಶೇಷ ಸ್ಥಾನ ಮಾನ ಕುರಿತಂತೆ ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಬಾಲಾಜಿ ಪಾದದಡಿ ನಿಂತು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಿಸಿದ್ದರು, ನಾನು ಹಿರಿಯ ರಾಜಕಾರಣಿ, ಹಾಗೂ ಮುಖ್ಯಮಂತ್ರಿಯಾಗಿ  ದೆಹಲಿಗೆ ತೆರಳಿ ವಿಶೇಷ ಸ್ಥಾನಮಾನ ಹಾಗೂ ಅನುದಾನ ಕೇಳಿದೆ, ಅದನ್ನು ನೀಡದೇ ನಮಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com