ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಗೆ ಅದರ ಕೇಂದ್ರ ಕಚೇರಿಯಲ್ಲೇ ಕನ್ನಡಿ ಹಿಡಿದಿದ್ದಾರೆ: ಕಾಂಗ್ರೆಸ್
ದೇಶ
ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಗೆ ಅದರ ಕೇಂದ್ರ ಕಚೇರಿಯಲ್ಲೇ ಕನ್ನಡಿ ಹಿಡಿದಿದ್ದಾರೆ: ಕಾಂಗ್ರೆಸ್
ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಚೇರಿಗೆ ಹೋಗುವುದಕ್ಕೆ ಮುನ್ನ ಅವರ ನಿಲುವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ಮಾಜಿ ರಾಷ್ಟ್ರಪತಿಗಳ ಭಾಷಣದ ಬಳಿಕ ಏಕಾ ಏಕಿ ಪ್ರಣಬ್ ಮುಖರ್ಜಿ ವಿರುದ್ಧದ ಹೇಳಿಕೆಗಳನ್ನು ಬಂದ್ ಮಾಡಿದೆ.
ನವದೆಹಲಿ: ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಚೇರಿಗೆ ಹೋಗುವುದಕ್ಕೆ ಮುನ್ನ ಅವರ ನಿಲುವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ಮಾಜಿ ರಾಷ್ಟ್ರಪತಿಗಳ ಭಾಷಣದ ಬಳಿಕ ಏಕಾ ಏಕಿ ಪ್ರಣಬ್ ಮುಖರ್ಜಿ ವಿರುದ್ಧದ ಹೇಳಿಕೆಗಳನ್ನು ಬಂದ್ ಮಾಡಿದೆ.
ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಣಬ್ ಮುಖರ್ಜಿ ಅವರು ಆರ್ ಎಸ್ಎಸ್ ಗೆ ಅದರ ಕೇಂದ್ರ ಕಚೇರಿಯಲ್ಲೇ ಕನ್ನಡಿ ಹಿಡಿದಿದ್ದಾರೆ ಎಂದು ಹೇಳಿದೆ. ಆದರೆ ಕೆಬಿ ಹೆಡ್ಗೆವಾರ್ ಅವರನ್ನು ದೇಶದ ಶ್ರೇಷ್ಠ ಪುತ್ರ ಎಂದಿರುವುದನ್ನು ಚರ್ಚಾರ್ಹ ಎಂದು ಹೇಳಿದೆ.
ಡಾ.ಮುಖರ್ಜಿ ಅವರು ಆರ್ ಎಸ್ಎಸ್ ಕೇಂದ್ರ ಕಚೇರಿಗೆ ಹೋಗುವುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು, ಆದರೆ ಪ್ರಣಬ್ ಮುಖರ್ಜಿ ಅವರು ಸಹಿಷ್ಣುತೆ, ಬಹುತ್ವ, ಹಾಗೂ ಬಹು ಸಂಸ್ಕೃತಿಯ ಬಗ್ಗೆ ಮಾತನಾಡುವ ಮೂಲಕ ಆರ್ ಎಸ್ಎಸ್ ಗೆ ಅದರ ಕೇಂದ್ರ ಕಚೇರಿಯಲ್ಲೇ ಕನ್ನಡಿ ಹಿಡಿದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ