ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌: ಐಐಟಿ ಬಾಂಬೆ ಭಾರತದ ಶ್ರೇಷ್ಠ ವಿಶ್ವವಿದ್ಯಾನಿಲಯ

ಐಐಟಿ ಬಾಂಬೆ ದೇಶದ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ.
ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌: ಐಐಟಿ ಬಾಂಬೆ ಭಾರತದ ಶ್ರೇಷ್ಠ ವಿಶ್ವವಿದ್ಯಾನಿಲಯ
ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌: ಐಐಟಿ ಬಾಂಬೆ ಭಾರತದ ಶ್ರೇಷ್ಠ ವಿಶ್ವವಿದ್ಯಾನಿಲಯ
ನವದೆಹಲಿ: ಐಐಟಿ ಬಾಂಬೆ ದೇಶದ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ. ಕ್ಯುಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌ ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು ದೆಹಲಿ ಐಐಟಿಯನ್ನು ಹಿಂದಿಕ್ಕಿ ಐಐಟಿ ಬಾಂಬೆ ದೇಶದ ಅಗ್ರಗಣ್ಯ ವಿಶ್ವವಿದ್ಯಾನಿಲಯವಾಗಿ ಸ್ಥಾನ ಗಿಟ್ಟಿಸಿದೆ.
ಕಳೆದ ಬಾರಿಗಿಂತ ಹದಿನೇಳು ಸ್ಥಾನ ಮೇಲಕ್ಕೇರಿರುವ ಐಐಟಿ ಬಾಂಬೆ ದೆಹಲಿ ಐಐಟಿ, ಬೆಂಗಳೂರಿನ ಐಐಎಸ್ಸಿಯನ್ನೂ ಹಿಂದಿಕ್ಕಿದೆ. ಜಾಗತಿಕವಾಗಿ ಐಐಟಿ ಬಾಂಬೆ 162ನೇ ಸ್ಥಾನ ಪಡೆದಿದ್ದರೆ ಬೆಂಗಳೂರಿನ ಐಐಅಎಸ್ಸಿ 170ನೇ ಸ್ಥಾನ, ದೆಹಲಿ ಐಐಅಟಿ 172ನೇ  ಸ್ಥಾನ ಪಡೆದುಕೊಂಡಿವೆ.
ಎರಡು ವರ್ಷದ ಹಿಂದೆ ಬೆಂಗಳೂರಿನ ಐಐಎಸ್ಸಿ ಮಾತ್ರವೇ ಜಾಗತಿಕ ರ‍್ಯಾಂಕಿಂಗ್‌  ಪಟ್ಟಿಯಲ್ಲಿದ್ದ 150 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಗಳಿಸಿತ್ತು. ಇದರ ಹೊರತಾಗಿ ದೇಶದ ಯಾವ ವಿಶ್ವವಿದ್ಯಾನಿಲ್ಲಯಗಳೂ ಜಾಗತಿಕವಾಗಿ ಶ್ರೇಷ್ಠ ವಿವಿಗಳ ಪಟ್ಟಿ ಸೇರುವಲ್ಲಿ ವಿಫಲವಾಗಿದ್ದವು.
ಇದೇ ವೇಳೆ ಅಮೆರಿಕದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರ‍್ಯಾಂಕಿಂಗ್‌  ಪಟ್ಟಿಯಲ್ಲಿ ಮೊದಲ ಸ್ಥಾನ ಕಳಿಸಿದ್ದು ಜಾಗತಿಕವಾಗಿ ಅತ್ಯಂತ ಶ್ರೇಷ್ಠ ವಿವಿಯಾಗಿ ಹೊರಹೊಮ್ಮಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com