ದೆಹಲಿ ಸುತ್ತಮುತ್ತ ಧೂಳು ಮಿಶ್ರಿತ ಬಿರುಗಾಳಿ: ಕಗತ್ತಲು

ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ ಕಂಡುಬಂದು ಧಾರಾಕಾರ ಮಳೆ ಸುರಿಯಿತು.
ದೆಹಲಿಯ ಚಿತ್ರ
ದೆಹಲಿಯ ಚಿತ್ರ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಸುತ್ತಮುತ್ತ ಇಂದು ಸಂಜೆ ಧೂಳು ಮಿಶ್ರಿತ ಬಿರುಗಾಳಿ ಉಂಟಾಗಿ ಕಗತ್ತಲು ಆವರಿಸಿತು. ಹವಾಮಾನದಲ್ಲಿ ದಿಢೀರನೇ ಇಂತಹ ಬದಲಾಣೆ  ಕಂಡುಬಂದು ಧಾರಾಕಾರ ಮಳೆ ಸುರಿಯಿತು.
ಎರಡು ಗಂಟೆ ಮುಂಚಿತವಾಗಿಯೇ ಸಂಜೆ 5 ಗಂಟೆ ವೇಳೆಗೆ ಕತ್ತಲು ಆವರಿಸಿತು . ಭಾರಿ ಮಳೆಯಿಂದಾಗಿ  ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು. ಬಿರುಗಾಳಿ ಸಹಿತ ಗಾಳಿ ಮಳೆಯಿಂದಾಗಿ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿರುವ ಘಟನೆ ವರದಿಯಾಗಿದೆ.
ಹರಿಯಾಣದ ಗುರುಗ್ರಾಮ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇಂತಹದೇ ವಾತವಾರಣ ವರದಿಯಾಗಿದೆ.ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ.
ಇಂದು  ಬಿರುಗಾಳಿ ಸಹಿತ  ಅಲ್ಪಪ್ರಮಾಣದ ಮಳೆಯಾಗಲಿದೆ ಎಂದು ನಿನ್ನೆಯೇ ಹವಾಮಾನ ಇಲಾಖೆ ಹೇಳಿಕೆ ನೀಡಿತ್ತು.  ಬೆಳಿಗ್ಗೆ ಸಾಮಾನ್ಯ ತಾಪಮಾನ 30 ಡಿಗ್ರಿ ಸೆಲ್ಸಿಯಸ್ಸ್  ದಾಖಲಾಗಿತ್ತು. ಸಂಜೆಯಾಗುತ್ತಿದ್ದಂತೆ ಶೇ.71 ರಷ್ಟು ಶೀತ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com