ಹೌರಾ: ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಕಗ್ಗೊಲೆ

ಹೌರಾದ ಜಗತ್ ಬಲಪುರ್ ನಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ..
ಕೊಲೆ ನಡೆದಜ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಕೊಲೆ ನಡೆದಜ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
Updated on
ಹೌರಾ:  ಹೌರಾದ ಜಗತ್ ಬಲಪುರ್ ನಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 
ಕಾರ್ತಿಕ್ ಢಾಕಿ ಕೊಲೆಯಾದ ದುರ್ದೈವಿ, ಈತ ನಿನ್ನೆಯಿಂದ ಕಾಣೆಯಾಗಿದ್ದ. ಘಟನೆಯನ್ನು ಖಂಡಿಸಿರುವ ಟಿಎಂಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ತಮ್ಮ ರಾಜಕೀಯ ದ್ವೇಷದಿಂದ ಕಾರ್ಯಕರ್ತರ  ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಆದರೆ ಟಿಎಂ ಸಿ ಆರೋಪವನ್ನು ತಿರಸ್ಕರಿಸಿರುವ  ಬಿಜೆಪಿ, ಹಿಂಸಾಚಾರದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿಯ ಅಪರಾಧಗಳು ನಡೆಯುವುದಿಲ್ಲ ಎಂದು ಹೇಳಿದೆ.
ನಾವು ಹಿಂಸಾಚಾರದ ಮೊರೆ ಹೋಗಿದ್ದರೇ ದೇಶದ ಸುಮಾರು 22-23 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿರುತ್ತಿರಲಿಲ್ಲ ಎಂದು ಬಿಜೆಪಿ ಹೇಳಿದೆ. ಟಿಎಂಸಿ ಪಶ್ಟಿಮ ಬಂಗಾಳವನ್ನು ಆಪ್ಘಾನಿಸ್ತಾನ ಮಾಡಲು ಹೊರಟಿದೆ, ರಾಜ್ಯಾದ್ಯಂತ ಜನರ ಕೊಲೆ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ದೇಬಂಜನ್  ಚಟರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com