ಅಮರ್ ಸಿಂಗ್
ದೇಶ
ಸಂಘ ಪರಿವಾರ ಅವಕಾಶವಾದಿ ರಾಜಕಾರಣದಲ್ಲಿ ನಂಬಿಕೆಯಿಟ್ಟಿಲ್ಲ: ಅಮರ್ ಸಿಂಗ್
ಸಂಘ ಪರಿವಾರ ಅವಕಾಶವಾದಿ ರಾಜಕಾರಣದಲ್ಲಿ ನಂಬಿಕೆಯಿಟ್ಟಿಲ್ಲ. ಎಲ್ಲಾ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಇದನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ.
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗಪುರದಲ್ಲಿ ನಡೆದ ಆರ್ ಎಸ್ ಎಸ್ ಸಭೆಯಲ್ಲಿ ಭಾಗವಹಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ಬೆನ್ನಲ್ಲೇ ಸಮಾಜವಾಜದಿ ಪಕ್ಷದಿಂದ ಉಚ್ಚಾಟಿತಗೊಂಡಿರುವ ಅಮರ್ ಸಿಂಗ್, ಸಂಘ ಪರಿವಾರ ಅವಕಾಶವಾದಿ ರಾಜಕಾರಣದಲ್ಲಿ ನಂಬಿಕೆಯಿಟ್ಟಿಲ್ಲ. ಎಲ್ಲಾ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಇದನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ.
ತಾವು ಮಾತನಾಡಿರುವ ವಿಡಿಯೋವನ್ನು ಅಮರ್ ಸಿಂಗ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಎಸ್ ಪಿ ಮತ್ತು ಆರ್ ಎಸ್ ಎಸ್ ಜೊತಗಿನ ಸಂಬಂಧದ ಬಗ್ಗೆ ವಿಡಿಯೋದಲ್ಲಿ ಅಮರ್ ಸಿಂಗ್ ಮಾತನಾಡಿದ್ದಾರೆ.
ನನ್ನ ಇಡಿ ಜೀವನವನ್ನು ನಾನು ಸಮಾಜವಾದಿ ಪಕ್ಷ ಮ್ತು ಮುಲಾಯಂ ಸಿಂಗ್ ಯಾದವ್ ಅವರಿಗಾಗಿ ಮುಡುಪಾಗಿಟ್ಟೆ, ಪಕ್ಷದ 25ನೇ ವರ್ಷದ ಸಂಸ್ಥಪನಾ ದಿನಾಚರಣೆಯಂದು ಮಾತನಾಡಿದ್ದ ಮುಲಾಯಂ ಸಿಂಗ್ ಯಾದವ್ ಪಕ್ಷಕ್ಕೆ ನಿಮ್ಮ ಕೊಡುಗೆ ಅಪಾರ ಎಂದು ಹೇಳಿದ್ದರು, ಆದರೆ ಅಖಿಲೇಶ್ ಯಾದವ್ ರಿಂದ ಪಕ್ಷ ಕಿರಿಕಿರಿ ಅನುಭವಿಸುತ್ತಿದೆ ಎಂದು ಆರೋಪಿಸಿದ್ದಾರೆ,
ಆರ್ ಎಸ್ ಎಸ್ ವ ಉನ್ನತ ಮುಖಂಡರು ನನದೆ ಹೆಚ್ಚಿನ ಗೌರವ ನೀಡುತ್ತಾರೆ. ನನಗೂ ಆರ್ ಎಸ್ ಎಸ್ ನಿಂದ ಕರೆ ಬಂದಿತ್ತು, ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳುವಂತೆ ಹೇಳಿತ್ತು. ಬೇರೆ ರಾಜಕೀಯ ಪಕ್ಷಗಳು ಇದನ್ನು ನೋಡಿ ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ