ರಾಂಚಿ: ಮುಸ್ಲಿಂ ಧರ್ಮ ಗುರು ಒಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ. .ಅಜರ್ ಉಲ್ ಇಸ್ಲಾಂ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ, ಸಂಜೆ ತಾವು ಪ್ರಾರ್ಥನೆ ಮುಗಿಸಿ ವಾಪಾಸಾಗುವಾಗ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ..ಅಜರ್ ಬಳಿ ಬಂದ ಗುಂಪೊಂದು ಜೈ ಶ್ರೀರಾಮ್ ಎಂದು ಮಂತ್ರ ಜಪಿಸುವಂತೆ ಹೇಳಿದೆ. ಆದರೆ ಅದಕ್ಕೊಪ್ಪದೇ ಇದ್ದ ಕಾರಣ ತಮ್ಮ ಮಗನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅಜರ್ ತಂದೆ ಆರೋಪಿಸಿದ್ದಾರೆ. .ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ತಲೆ, ಕೈ ಹಾಗೂ ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. .ಜೂನ್ ತಿಂಗಳ ಆರಂಭದಲ್ಲಿ ಗುಂಪೊಂದು ಹರ್ಯಾಣದ ಕರ್ನಾಲ್ ನ ಮಸೀದಿಯಲ್ಲಿ ನಮಾಜ್ ಮಾಡುವ ವೇಳೆ ದಾಳಿ ನಡೆಸಿ ಹಲವರ ಮೇಲೆ ಹಲ್ಲೆ ಮಾಡಿದ್ದರು. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics