ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಹೆಚ್‏ಪಿ, ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'!

ಕೇಂದ್ರೀಯ ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎನ ಇತ್ತೀಚಿಗೆ ಪ್ರಕಟಿಸಿದ ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.
ಸಿಐಎ ಪ್ರತಿಬಿಂಬಿಸುವ ಚಿತ್ರ
ಸಿಐಎ ಪ್ರತಿಬಿಂಬಿಸುವ ಚಿತ್ರ
ನವದಹೆಲಿ: ಅಮೆರಿಕಾದ  ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎ ಇತ್ತೀಚಿಗೆ ಪ್ರಕಟಿಸಿದ  ವರ್ಲ್ಡ್ ಫ್ಯಾಕ್ಟ್‏ಬುಕ್  ನಲ್ಲಿ  ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.
ಸಿಐಎ ಅಮೆರಿಕಾ ಸರ್ಕಾರದ ಗುಪ್ತಚರ ಸಂಸ್ಥೆಯ ಒಂದು ಭಾಗವಾಗಿದ್ದು,  ವಿಶ್ವ ಹಿಂದೂಪರಿಷದ್ ಹಾಗೂ ಬಜರಂಗ ದಳ ರಾಜಕೀಯ ಹಿತಾಸಕ್ತಿಯ ಗುಂಪುಗಳೆಂದು ವರ್ಗಕರಿಸಲಾಗಿದೆ.
ಈ ಗುಂಪಿನ ನಾಯಕರು  ಚುನಾವಣೆಗೆ ನಿಲ್ಲುವುದಿಲ್ಲ ಆದರೂ, ರಾಜಕೀಯದಲ್ಲಿ ತೊಡಗಿಸಿಕೊಂಡಿರುತ್ತಾರೆ ಅಥವಾ ರಾಜಕೀಯ ಒತ್ತಡವನ್ನುಂಟುಮಾಡಲಾಗುತ್ತದೆ ಎಂದು ವಿವರಿಸಲಾಗಿದೆ.
ಭಾರತದಲ್ಲಿನ  ರಾಜಕೀಯ ಹಿತಾಸಕ್ತಿ ಗುಂಪುಗಳ ಪಟ್ಟಿಯಲ್ಲಿ ಆರ್ ಎಸ್ ಎಸ್,  ಹುರಿಯತ್ ಕಾನ್ಪರೆನ್ಸ್,  ಜಮಾಯಿತ್ ಉಲೇಮಾ ಇ- ಹಿಂದ್   ಸಂಘಟನೆಗಳನ್ನು ಸಿಐಎ ಹೆಸರಿಸಿದೆ. ಆರ್ ಎಸ್ ಎಸ್  ರಾಷ್ಟ್ರೀಯವಾಧಿ ಸಂಘಟನೆ , ಹುರಿಯತ್ ಕಾನ್ಪರೆನ್ಸ್ ಪ್ರತೇಕತಾವಾದಿ ಗುಂಪು,  ಜಮಾಯಿತ್ ಉಲೇಮಾ ಇ- ಹಿಂದ್    ಧಾರ್ಮಿಕ ಸಂಘಟನೆ ಎಂದು ಅರ್ಥೈಹಿಸಲಾಗಿದೆ.
ಸಿಐಎ ವಾರ್ಷಿಕವಾಗಿ ವರ್ಲ್ಡ್ ಫ್ಯಾಕ್ಟ್‏ಬುಕ್   ಪ್ರಕಟಿಸುತ್ತದೆ, ಇದು  ಯಾವುದಾದರೊಂದು  ದೇಶದಲ್ಲಿನ ಗುಪ್ತಚರ ಅಥವಾ ವಾಸ್ತವಿಕ ಉಲ್ಲೇಖ ವಸ್ತುಗಳನ್ನು ಯು.ಎಸ್. ಸರ್ಕಾರಕ್ಕೆ ನೀಡುತ್ತಿದೆ. ಆ ದೇಶದ ಇತಿಹಾಸ, ಜನತೆ, ಸರ್ಕಾರ, ಆರ್ಥಿಕ, ಇಂಧನ, ಭೌಗೋಳಿಕತೆ, ಸಾರಿಗೆ ಮತ್ತು ಸಂವಹನ, ರಕ್ಷಣಾ ವ್ಯವಸ್ಥೆ, ಮತ್ತಿತರ ಬಹು ಹಂತದ ವಿಷಯಗಳನ್ನು ಇದು ಒಳಗೊಂಡಿರುತ್ತದೆ.
ಸಿಐಎ 1962 ರಿಂದಲೂ  267 ರಾಷ್ಟ್ರಗಳ ಮಾಹಿತಿಯನ್ನು ಸಂಗ್ರಹಿಸಿದೆ. ಆದರೆ, 1975 ರಿಂದ ಮಾತ್ರ ಪ್ರಕಟಿಸಲಾಗುತ್ತಿದೆ.  ಅಮೆರಿಕಾ ನೀತಿ ನಿರ್ವಾಹಕಾರರು ಹಾಗೂ ಸಮನ್ವಯಗಾರರಿಗಾಗಿ  ವರ್ಲ್ಡ್ ಫ್ಯಾಕ್ಟ್‏ಬುಕ್ ಪ್ರಕಟಿಸುತ್ತಿದೆ.  ಅಮೆರಿಕಾದ ಮೂರು ಗುಪ್ತಚರ ಸಂಸ್ಥೆಗಳ  ಪೈಕಿ ಸಿಐಎ ಕೂಡಾ ಒಂದಾಗಿದೆ. ಅಧ್ಯಕ್ಷರ ಡೈಲಿ ಬ್ರಿಫ್ ಮತ್ತು ಎನ್ ಐಇ ಮತ್ತೆರಡು ಗುಪ್ತಚರ  ಸಂಸ್ಥೆಗಳಾಗಿವೆ.
ಸಿಐಎ ಸಮರ್ಥನೆಯನ್ನು ಬಿಜೆಪಿ ಸಂವಾದ ಘಟಕದ ಮಾಜಿ ರಾಷ್ಟ್ರೀಯ  ಸಂಚಾಲಕ  ಖೇಮ್ ಚಂದ್ ಶರ್ಮಾ ತಿರಸ್ಕರಿಸಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಸಿಎಐ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com