ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಕೃಷಿಕರ ಸಮಸ್ಯೆಗಳಿಗೆ ಪ್ರಮುಖ ಆದ್ಯತೆ

ನಾಳೆ ನೀತಿ ಆಯೋಗದ ನಾಲ್ಕನೇ ಆಡಳಿತ ಮಂಡಳಿ ಸಭೆ ನಡೆಯುತ್ತಿದ್ದು, 2022 ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಸಾಧನೆಗೆ ರಾಜ್ಯಗಳ ಸಹಕಾರಕ್ಕೆ ಕೇಂದ್ರಸರ್ಕಾರ ಮನವಿ ಸಲ್ಲಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:ನಾಳೆ ನೀತಿ ಆಯೋಗದ ನಾಲ್ಕನೇ ಆಡಳಿತ ಮಂಡಳಿ ಸಭೆ ನಡೆಯುತ್ತಿದ್ದು, ಕೃಷಿಕರ ಸಮಸ್ಯೆಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. 2022 ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ  ಗುರಿ ಸಾಧನೆಗೆ  ರಾಜ್ಯಗಳ  ಸಹಕಾರವನ್ನು ಕೇಂದ್ರ ಸರ್ಕಾರ ಕೋರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಸುಮಾರು 50 ಕೋಟಿ ಜನರಿಗೆ ಆರೋಗ್ಯ ವಿಮೆ ವಿಸ್ತರಿಸಲು ಕೋರಿರುವ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯನ್ನು ರೂಪಿಸಲು ರಾಜ್ಯ ಸರ್ಕಾರಗಳ ಬೆಂಬಲವನ್ನೂ ಸಹ ಪಡೆಯಲಿದೆ.
"ಆಡಳಿತ ಮಂಡಳಿ ಸಭೆಯ ಕಾರ್ಯಸೂಚಿಯಲ್ಲಿ ಮಕ್ಕಳ ಮತ್ತು ತಾಯಂದಿರ ಪ್ರತಿರಕ್ಷಣೆಗಾಗಿ ಮಿಷನ್ ಇಂದ್ರಧನುಷ್  ಮಿಷನ್ ಯೋಜನೆ ಮತ್ತಷ್ಟು ವಿಸ್ತರಣೆಯನ್ನು ಕೂಡಾ ಒಳಗೊಂಡಿದೆ. 2019 ರಲ್ಲಿ ಮಹಾತ್ಮಾ ಗಾಂಧಿಯವರ 150 ನೇ ಜನ್ಮದಿನದ ಸ್ಮರಣೆಗಾಗಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು  ನೀತಿ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀತಿ ಆಯೋಗ ಸಿದ್ಧಪಡಿಸಿದ  ಮೂರು ವರ್ಷಗಳ ಕ್ರಿಯಾ ಯೋಜನೆ  ಅಳವಡಿಕೆಗೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕಳೆದ ಆಡಳಿತ ಮಂಡಳಿ ಸಭೆ ವಿಫಲಗೊಂಡಿತ್ತು. ಆದಾಗ್ಯೂ,  ನಾಳೆ ನಡೆಯಲಿರುವ  ಸಭೆಯಲ್ಲಿ ಈ ಸಂಬಂಧ ಯಾವುದೇ ರೀತಿಯ ಚರ್ಚೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೃಷಿ ಮಾರುಕಟ್ಟೆಯ ಸುಧಾರಣೆ ಹಾಗೂ    ಇ-ನಾಮ್  (ರಾಷ್ಟ್ರೀಯ ಕೃಷಿ ಮಾರುಕಟ್ಟೆ)  ವ್ಯವಸ್ಥೆ ಅಳವಡಿಸಿಕೊಳ್ಳಲು ರಾಜ್ಯಗಳನ್ನು ಉತ್ತೇಜಿಸುವ ಬಗ್ಗೆ ಸಭೆಯಲ್ಲಿ ಗಮನ ಹರಿಸಲಾಗುತ್ತಿದ್ದು, ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ  ಕಳೆದ ಮೂರು ವರ್ಷಗಳಲ್ಲಿ ನೀತಿ ಆಯೋಗದಿಂದ  ಮಾಡಲ್ಪಟ್ಟ ಸುಧಾರಣೆಗಳನ್ನು  ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಆದೇಶ ಮಾಡಲಾಗುತ್ತಿದೆ.
ಇತ್ತೀಚೆಗೆ  ನೀತಿ ಆಯೋಗ   ಶಿಫಾರಸು ಮಾಡಿದ್ದ ಕೃಷಿ ಮಾರ್ಕೆಟಿಂಗ್ ಸುಧಾರಣೆಗಳ  ಬಗ್ಗೆ ಹಲವಾರು ರಾಜ್ಯಗಳಿಂದ ಅಸಮಾಧಾನ   ವ್ಯಕ್ತವಾಗಿದೆ,  ಆಡಳಿತ ಮಂಡಳಿಯ ಸಭೆ ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. "ಮಧ್ಯಾಹ್ನದ ಸಭೆಯಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯು ಪೌಷ್ಟಿಕಾಂಶದ ಸಮಸ್ಯೆಗಳ ಬಗ್ಗೆಯೂ ಉದ್ದೇಶಪೂರ್ವಕ ಜಿಲ್ಲೆಗಳಲ್ಲದೆ ಉದ್ದೇಶಪೂರ್ವಕವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com