ದೆಹಲಿ ಸಿಎಂ ಕೇಜ್ರಿವಾಲ್ ನಕ್ಸಲೈಟ್ ಇದ್ದಂತೆ, ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೇಕೆ?: ಸುಬ್ರಹ್ಮಣ್ಯನ್​ ಸ್ವಾಮಿ ಪ್ರಶ್ನೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಓರ್ವ ನಕ್ಸಲ್ ಇದ್ದಂತೆ, ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ.....
ಸುಬ್ರಹ್ಮಣ್ಯನ್​ ಸ್ವಾಮಿ
ಸುಬ್ರಹ್ಮಣ್ಯನ್​ ಸ್ವಾಮಿ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಓರ್ವ ನಕ್ಸಲ್ ಇದ್ದಂತೆ, ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ನಾನಾ ರಾಜ್ಜ್ಯಗಳ ಮುಖ್ಯಂತ್ರಿಗಳು ಬೆಂಬಲ ನೀಡಿದ್ದೇಕೆ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಹ್ಮಣ್ಯನ್​ ಸ್ವಾಮಿ ಪ್ರಶ್ನಿಸಿದ್ದಾರೆ.
ಎಎನ್​ಐ ಸುದ್ದಿಸಂಸ್ಥೆ ಜತೆ ಮಾತನಾಡಿರುವ ಸುಬ್ರಹ್ಮಣ್ಯನ್ ಸ್ವಾಮಿ ದೆಹಲಿಯಲ್ಲಿ ಐಎಎಸ್ಅಧಿಕಾರಿಗಳ ಮುಷ್ಕರ ನಿಲ್ಲಿಸಲು ಆದೇಶಿಸಬೇಕೆಂದು ಲೆಫ್ಟಿನೆಂಟ್​ ಗವರ್ನರ್ ಕಛೇರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅರವಿಂದ ಕೇಜ್ರಿವಾಲ್ ಬಗ್ಗೆ ಕಿಡಿ ಕಾರಿದ್ದಾರೆ/
ಕೇಜ್ರಿವಾಲ್ ನಕ್ಸಲೈಟ್​ ಇದ್ದಂತೆ. ಎಂದ ಅವರು ಎಚ್​.ಡಿ ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಬೆಂಬಲ ನೀಡಿದ್ದೇಕೆ? ಎಂದು ಕೇಳಿದ್ದಾರೆ.
ದೆಹಲಿಯಲ್ಲಿ ಕಳೆದ ಮೂರು ತಿಂಗಳಿಂದ ಐಎಎಸ್​ ಅಧಿಕಾರಿಗಳು ಮುಷ್ಕರ ನಾಡೆಸಿದ್ದು ಇದನ್ನು ನಿಲ್ಲಿಸಲು ಲೆ. ಗವರ್ನರ್ ಆದೇಶಿಸಬೇಕು, ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಸೇರಿ ಅಹಲವು ಬೇಡಿಕೆಗಳನ್ನಿಟ್ಟು ಕಳೆದ ಆರು ದಿನಗಳಿಂದಲೂ ಲೆ. ಗವರ್ನರ್ ಕಛೇರಿಯಲ್ಲಿ ಧರಣಿ ನಡೆಸಿದ್ದಾರೆ.
ಶನಿವಾರದಂದು ಸಹ ಧರಣಿ ಮುಂದುವರಿಸಿದ್ದ ಕೇಜ್ರಿವಾಲ್ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಬಿಜೆಪಿ ಹೊರತಾದ ರಾಜ್ಯಗಳ ಮುಖ್ಯಂತ್ರಿಗಳು ಭೇಟಿಯಾಗಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com