ಎಲ್-ಜೆ v/s ಕೇಜ್ರಿವಾಲ್: ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಆಪ್ ಕಾರ್ಯಕರ್ತರ ಬಂಧನ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಪ್ ಸರ್ಕಾರದ ನಡುವಿನ ಬಿಕ್ಕಟ್ಟು ತಾರಕಕೇರಿದ್ದು, ಭಾನುವಾರ ಪ್ರಧಾನಿ....
ಆಪ್ ಕಾರ್ಯಕರ್ತರ ಪ್ರತಿಭಟನೆ
ಆಪ್ ಕಾರ್ಯಕರ್ತರ ಪ್ರತಿಭಟನೆ
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಪ್ ಸರ್ಕಾರದ ನಡುವಿನ ಬಿಕ್ಕಟ್ಟು ತಾರಕಕೇರಿದ್ದು, ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಸಂಸತ್ ರಸ್ತೆಯಲ್ಲೇ ವಶಕ್ಕೆ ಪಡೆದಿದ್ದಾರೆ. 
ಕಳೆದ ಆರು ದಿನಗಳಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಧರಣಿ ನಡೆಸುತ್ತಿದ್ದು, ತಮ್ಮ ನಾಯಕನ ಪ್ರತಿಭಟನೆ ಬೆಂಬಲಿಸಿ ಆಪ್ ಕಾರ್ಯಕರ್ತರು ಇಂದು ಸಂಜೆ ಮಂಡಿ ಹೌಸ್ ನಿಂದ ಪ್ರಧಾನಿ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದರು. 
ಪ್ರಧಾನಿ ನಿವಾಸಕ್ಕೆ ತೆರಳಲು ಯತ್ನಿಸಿದ ಆಪ್ ಕಾರ್ಯಕರ್ತರನ್ನು ಸಂಸತ್ ರಸ್ತೆಯಲ್ಲೇ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕು ಮುನ್ನ ಪ್ರಧಾನಿ ಕಚೇರಿ ಅಥವಾ ನಿವಾಸದವರೆಗೆ ಆಪ್ ಕರೆ ನೀಡಿರುವ ಪ್ರತಿಭಟನಾ ರ್ಯಾಲಿಗೆ ಅನುಮತಿ ಇಲ್ಲ ಮತ್ತು ಅನುಮತಿಗಾಗಿ ಮನವಿ ಸಹ ಸಲ್ಲಿಸಿಲ್ಲ. ಅದು ನಿಷೇಧಿತ ಪ್ರದೇಶ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.
ಮುಷ್ಕರ ಕೈಬಿಡುವಂತೆ ಐಎಎಸ್ ಅಧಿಕಾರಿಗಳು ಸೂಚಿಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಒತ್ತಾಯಿಸಿ ಅರವಿಂದ್ ಕೇಜ್ರಿವಾಲ್ ಅವರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ನಾಲ್ಕು ತಿಂಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಸಭೆಗಳಿಗೆ ಹಾಜರಾಗುತ್ತಿಲ್ಲ. ಹಾಗಾಗಿ ಸರ್ಕಾರದ ಕೆಲಸಗಳು ಸ್ಥಗಿತಗೊಂಡಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಐಎಎಸ್ ಅಧಿಕಾರಿಗಳು ಯಾವುದೇ ಮುಷ್ಕರ ನಡೆಸುತ್ತಿಲ್ಲ ಎಂದು ಐಎಎಸ್ ಅಧಿಕಾರಿ ಮನೀಷಾ ಸಕ್ಸೇನಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com