ಗ್ರಾಮಸ್ಥರ ಸೆಲ್ಫಿ ಹುಚ್ಚಿಗೆ ಹೆಬ್ಬಾವಿನೊಂದಿಗೆ ಜೀವದ ಜತೆಗೆ ಹೋರಾಡಿದ ಅರಣ್ಯಾಧಿಕಾರಿ!

ಹೆಬ್ಬಾವಿನ ರಕ್ಷಣೆ ನಂತರ ಹಾವಿನೊಂದಿಗೆ ಗ್ರಾಮಸ್ಥರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರಿಂದ ಅರಣ್ಯಾಧಿಕಾರಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕೀಡಬೇಕಾಗಿ ಬಂದಿತ್ತು...
ಹೆಬ್ಬಾವು
ಹೆಬ್ಬಾವು
ಜಲ್ಪೈಗುರಿ(ಪಶ್ಚಿಮಬಂಗಾಳ): ಹೆಬ್ಬಾವಿನ ರಕ್ಷಣೆ ನಂತರ ಹಾವಿನೊಂದಿಗೆ ಗ್ರಾಮಸ್ಥರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರಿಂದ ಅರಣ್ಯಾಧಿಕಾರಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕೀಡಬೇಕಾಗಿ ಬಂದಿತ್ತು. 
ಹೌದು ಜಲ್ಪೈಗುರಿಯ ಬೈಕುಂತಾಪುರ ಅರಣ್ಯದಲ್ಲಿ ಹೆಬ್ಬಾವನ್ನು ರಕ್ಷಣೆ ಮಾಡಲಾಗಿತ್ತು. ಈ ಅರಣ್ಯಾಧಿಕಾರಿ ಸಂಜಯ್ ದತ್ ಎಂಬುವರು ಹೆಬ್ಬಾವನ್ನು ಹೆಗಲ ಮೇಲೆ ಹಾಕಿಕೊಂಡು ಬರುತ್ತಿರುವಾಗ ಗ್ರಾಮಸ್ಥರು ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾದರು. 
ಹೆಚ್ಚು ಜನರನ್ನು ಕಂಡಿದ್ದರಿಂದ ಹೆಬ್ಬಾವು ಸ್ವಲ್ಪ ಗಲಿಬಿಲಿಗೊಂಡು ಹಿಡಿದುಕೊಂಡಿದ್ದ ಅರಣ್ಯಾಧಿಕಾರಿಯನ್ನು ಕಚ್ಚಲು ಮುಂದಾಯಿತು. ಇದರಿಂದಾಗಿ ಅರಣ್ಯಾಧಿಕಾರಿ ಸಹ ಕೊಂಚ ಆತಂಕಕ್ಕೆ ಸಿಲುಕಿದ್ದರು. 
ಇನ್ನು 2016ರಲ್ಲಿ ರಾಜಸ್ಥಾನದಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ರಕ್ಷಣೆ ಮಾಡಲಾಗಿದ್ದ ಹೆಬ್ಬಾವಿನ ಜತೆ ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಯುವನೊರ್ವ ಹಾವಿನಿಂದ ಕಚ್ಚಿಸಿಕೊಂಡಿದ್ದ ಆದರೆ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com