ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ , ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಬಗ್ಗೆ ತಾವೇನೂ ಸಂಭ್ರಮಪಡುವುದಿಲ್ಲ ಎಂದು ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥ ಒಮಾರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
ಶ್ರೀನಗರ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ , ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಬಗ್ಗೆ ತಾವೇನೂ ಸಂಭ್ರಮಪಡುವುದಿಲ್ಲ ಎಂದು ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥ ಒಮಾರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
ರಾಜ್ಯಪಾಲ ಎನ್ ಎನ್ ವೋರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, 2014 ಹಾಗೂ 2018 ರಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಗೆ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಬಹುಮತವಿಲ್ಲ ದೊರೆತಿಲ್ಲವಾದ್ದರಿಂದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತಾವೂ ಯಾರನ್ನೂ ಕೇಳಿಕೊಂಡಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಯಾವ ಪಕ್ಷಕ್ಕೂ ಸ್ಪಷ್ಪ ಬಹುಮತ ಇಲ್ಲದೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ರಾಜ್ಯಪಾಲರ ಬಳಿ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.
ಬಿಜೆಪಿ- ಪಿಡಿಪಿ ಕಡಿತದಿಂದ ನಾವು ಸಂಭ್ರಮಾಚರಣೆ ಮಾಡಲ್ಲ, ರಾಜ್ಯದಲಲಿ ಪ್ರಜಾಪ್ರಭುತ್ವ ಕುಸಿತದ ಬಗ್ಗೆ ನೋವಾಗುತ್ತಿದೆ. ಚುನಾವಣೆಯ ವಾತಾವಾರಣ ಸೃಷ್ಟಿಯಾಗಿದ್ದು, ಮುಂದೆ ಯಾವ ಸರ್ಕಾರ ಬರಬೇಕು ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ ಎಂದರು.
ಬಿಜೆಪಿ , ಪಿಡಿಪಿ ಮೈತ್ರಿ ಸರ್ಕಾರ ಬೀಳಬಹುದೆಂದು ನಿರೀಕ್ಷಿಸಿದ್ದೇನೆ. ಆದರೆ, ಇಷ್ಟು ಬೇಗ ಅದು ಕೊನೆಯಾಗುತ್ತೆ ಅಂದುಕೊಂಡಿರಲಿಲ್ಲ. ಅನಿರೀಕ್ಷಿತ ರೀತಿಯಲ್ಲಿ ಸರ್ಕಾರ ಪತನವಾಗಿದೆ ಎಂದರು.
ಒಂದು ವೇಳೆ ಭದ್ರತಾ ವ್ಯವಸ್ಥೆ ಕುಂಠಿತಗೊಂಡು ಜನರು ನೋವು ಅನುಭವಿಸಿದ್ದರೆ ಅದಕ್ಕೆ ಬಿಜೆಪಿ, ಪಿಡಿಪಿ ಪಕ್ಷಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.