ನವದೆಹಲಿ: ಮಕ್ಕಳ್ ನೀಧಿ ಮೈಯ್ಯ ಸಂಸ್ಥಾಪಕ ಹಾಗೂ ನಟ ಕಮಲ್ ಹಾಸನ್ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು..ರಾಹುಲ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್ ಅವರು, ಇದೊಂದು ಔಪಚಾರಿಕ ಭೇಟಿ ಅಷ್ಟೆ. ಇಬ್ಬರು ತಮಿಳುನಾಡು ರಾಜಕೀಯದ ಬಗ್ಗೆ ಕೆಲಕಾಲ ಚರ್ಚಿಸಿದೆವು ಎಂದರು..ಕಮಲ್ ಹಾಸನ್ ಅವರು ರಾಹುಲ್ ಭೇಟಿಯ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ..ಕಮಲ್ ಹಾಸನ್ ಅವರು ಇದಕ್ಕು ಮುನ್ನ ತಮ್ಮ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮೈಯ್ಯ ನೋಂದಣಿಗಾಗಿ ಕೇಂದ್ರ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು..ಪಕ್ಷದ ನೋಂದಣಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಕೆಲ ಮಾಹಿತಿ ಕೇಳಿದರು. ಅದನ್ನು ನಾವು ನೀಡಿದ್ದೇವೆ ಎಂದು ಕಮಲ್ ತಿಳಿಸಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics