ಮಧ್ಯ ಪ್ರದೇಶ: ಹೊಸ ಸಚಿವರಿಗೆ 'ಗೋ ಸಚಿವಾಲಯ' ಬೇಕಂತೆ!

ಮಧ್ಯಪ್ರದೇಶ ಸರ್ಕಾರದ ಹೊಸ ಕ್ಯಾಬಿನೆಟ್ ಸಚಿವರಾಗಿ ನೇಮಕವಾಗಿರುವ ಸ್ವಾಮಿ ಅಖಿಲೇಶ್ವರಾನಂದ ರಾಜ್ಯದಲ್ಲಿ ಗೋ ಸಚಿವಾಲಯ ರಚಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಒತ್ತಾಯಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹ್ಹಾಣ್
ಶಿವರಾಜ್ ಸಿಂಗ್ ಚೌಹ್ಹಾಣ್

ಭೂಪಾಲ್: ಮಧ್ಯಪ್ರದೇಶ ಸರ್ಕಾರದ  ಹೊಸ ಕ್ಯಾಬಿನೆಟ್ ಸಚಿವರಾಗಿ ನೇಮಕವಾಗಿರುವ  ಸ್ವಾಮಿ ಅಖಿಲೇಶ್ವರಾನಂದ ರಾಜ್ಯದಲ್ಲಿ ಗೋ ಸಚಿವಾಲಯ ರಚಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್  ಅವರನ್ನು ಒತ್ತಾಯಿಸಿದ್ದಾರೆ.

ರಾಜಸ್ತಾನದಲ್ಲಿ  ಗೋ  ಸಚಿವಾಲಯವಿರುವಂತೆ  ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ  ಮಧ್ಯಪ್ರದೇಶದಲ್ಲೂ  ಗೋ ಸಚಿವಾಲಯ ರಚಿಸಬೇಕೆಂದು ಅವರು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ.
  ಗೋ ಸಚಿವಾಲಯ ಸ್ಥಾಪನೆಯಿಂದ ಗೋ ಅನ್ನು ಇತರ ಪ್ರಾಣಿಗಳಿಂದ ವಿಂಗಂಡಿಸಬಹುದಲ್ಲದೇ ಬಜೆಟ್ ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಈ ಯೋಜನೆಯಲ್ಲಿ ರಾಜ್ಯಸರ್ಕಾರ 15 ಸಾವಿರ ಕೋಟಿ ರೂ ಪಡೆಯಬಹುದಾಗಿದ್ದು, ಅದರಲ್ಲಿ ಅರ್ಧದಷ್ಟು ಮಾತ್ರ ಖರ್ಚು ಮಾಡುವುದಾಗಿ ಸಿಎಂ ಹೇಳಿದ್ದಾರೆ. ಆದ್ದರಿಂದ ಇದು ವ್ಯರ್ಥವಾಗುವುದು ಬೇಡ, ನೀವು ಗೋ ಸಂರಕ್ಷಣೆ ಮಂಡಳಿಯ ಭಾಗವಾಗಿದ್ದು, ನನ್ನಗೆ 1 ಸಾವಿರ ಕೋಟಿ ರೂಪಾಯಿ ಬಜೆಟ್ ಕೊಟ್ಟರೆ  ಶಕ್ತಿ ತುಂಬುವುದಾಗಿ ಅವರು ಹೇಳಿದ್ದೇನೆ. ನಾನೇನೂ ಅಸಂವಿಧಾನಿಕ ಬೇಡಿಕೆ ಇಟ್ಟಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯ ಗೋ ಸಂರಕ್ಷಣಾ ಮಂಡಳಿಯ ಮಾಡಿ ಅಧ್ಯಕ್ಷರಾಗಿದ್ದ ಅಖಿಲೇಶ್ವರಾನಂದ ಅವರನ್ನು ಜೂನ್ 13 ರಂದು ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಇದಕ್ಕೂ ಮುಂಚೆ ಅವರು ರಾಜ್ಯಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com