ಕಿಶೋರಿಲಾಲ್ ಕುಟುಂಬದವರು ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದ ಭೂಮಿಯಲ್ಲಿ ಯಾದವ್ ಹಾಗೂ ಇತರ ನಾಲ್ಕು ಮಂದಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿದ್ದನ್ನು ಕಂಡ ಕಿಶೋರಿಲಾಲ್ ಅದನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಕಿಶೋರಿ ಲಾಲ್ ಮೇಲೆ ಹಲ್ಲೆ ನಡೆದಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಘಟನೆ ಕಿಶೋರಿಲಾಲ್ ರ ಪತ್ನಿ ಎದುರೇ ನಡೆದಿದ್ದು ಅಸಹಾಯಕಳಾಗಿದ್ದ ಪತ್ನಿ ಕುಟುಂಬ ಸದಸ್ಯರಿಗೆ ಹಾಗೂ ನೆರೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಎಲ್ಲಾ ಪ್ರಯತ್ನಗಳ ನಡುವೆಯೂ ಕಿಶೋರಿಲಾಲ್ ನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.