ಲಂಡನ್: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 300 ಸೀಟುಗಳನ್ನು ಗೆಲ್ಲುವುದಾಗಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ಬಕಿಂಗ್ ಹ್ಯಾಮ್ ಶೈರ್ ನ ಲ್ಯಾಟಿಮೇರ್ ನಲ್ಲಿ ಆಯೋಜಿಸಿದ್ದ, ಭಾರತ ಇಂಗ್ಲೆಂಡ್ ನಾಯಕತ್ವ ಸಮಾವೇಶದಲ್ಲಿ, ದೆಹಲಿಯಿಂದ ವಿಡಿಯೋ ಲಿಂಕ್ ನಲ್ಲಿ ಮಾತನಾಡಿದ ಅವರು, ಯಾವುದು ಅಸಾಧ್ಯವಲ್ಲ, ಭಾರತ ಎರಡು ಅಂಕಿಯ ಅಭಿವೃದ್ಧಿ ಸಾಧಿಸಿದೆ, ದೇಶದ ಮಧ್ಯಮ ವರ್ಗದ ಜನತೆಯ ಆಶೋತ್ತರಗಳನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.
ಜೊತೆಗೆ ಲೋಕಸಭೆ ಚುನಾವಣೆಯಲ್ಲಿ 300 ಸೀಟುಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಭವಿಷ್ಯದ ಸಿದ್ಧತೆಗಾಗಿ ಭಾರತದಲ್ಲಿ ಬಿಜೆಪಿ ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಸ್ಥೆ ಜಾರಿ ಮಾಡಿದೆ.
ನಾನು ಈದ ಸದ್ಯ ಗಂಭೀರವಾಗಿರಲು ಪ್ರಯತ್ನಿಸುತ್ತೇನೆ, ಚುನಾವಣೆ ಬಂದಾಗ ಜನರೇ ಅದನ್ನು ತೋರ್ಪಡಿಸುತ್ತಾರೆ ಎಂದಿದ್ದಾರೆ.
ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಬೆಳೆದು ಎರಡು ಅಂಕಿಗೆ ಏರಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.