ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥ ಎಂದು ಕರೆದ ಬಿಜೆಪಿ ಮುಖಂಡೆ

ಛತ್ತೀಸ್ ಗಢದ ದುರ್ಗ್ ಜಿಲ್ಲೆಯ ಬಿಜೆಪಿಯ ಸಂಸದೆಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿದ್ದಾರೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ದುರ್ಗ್ :  ಛತ್ತೀಸ್ ಗಢದ ದುರ್ಗ್ ಜಿಲ್ಲೆಯ ಬಿಜೆಪಿಯ ಸಂಸದೆಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿದ್ದಾರೆ. ಕೋಕಾ ಕೋಲಾ ಕಂಪನಿ ಸ್ಥಾಪಕರ ಬಗ್ಗೆ  ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ  ಬಿಜೆಪಿಯ ಸಂಸದೆ ಸರೋಜಾ ಪಾಂಡೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸರೋಜಾ ಪಾಂಡೆ, ರಾಹುಲ್ ಗಾಂಧಿ ಖಂಡಿತವಾಗಿಯೂ ಕಲಿಯಲು ಪ್ರಯತ್ನಿಸುತ್ತಿದ್ದಾರೆ .  ಕಲಿಯಲು ವಯಸ್ಸು ಇದೆ. ಆದರೆ,  40 ನೇ ವಯಸ್ಸಿನ ನಂತರ ಕಲಿಯುವ ವ್ಯಕ್ತಿಯು ಕಲಿತವರು ಅಂತ ಕರೆಯಲು ಸಾಧ್ಯವಿಲ್ಲ.  ಅಂತಹ ವ್ಯಕ್ತಿಯನ್ನು ಮಾನಸಿಕ ದುರ್ಬಲ ವ್ಯಕ್ತಿ ಎಂದು ಕರೆಯಲಾಗುತ್ತದೆ ಎಂದು ಟೀಕಿಸಿದ್ದಾರೆ.
ಜೂನ್ 11 ರಂದು   ರಾಷ್ಟ್ರೀಯ ಹಿಂದುಳಿದ ವರ್ಗಗಳ  ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೋಕಾ ಕೋಲಾ ಕಂಪನಿ ಸ್ಥಾಪಕರು ಯಾರು ಗೊತ್ತಾ, ಅವರು ಶಿಕಾಂಜಿ ಅಂದರೆ ನಿಂಬೆ ಪಾನಕ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದಕ್ಕೂ ಮುನ್ನಾ ಪ್ರಧಾನಮಂತ್ರಿ ಅವರ  ನೀತಿಯನ್ನು ಟೀಕಿಸುವ ಭರದಲ್ಲಿ ಅಮೆರಿಕಾದ ಯಶಸ್ವಿ ಉದ್ಯಮಿಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಸಿದ್ದ ಆಹಾರ ಉದ್ಯಮ ಕಂಪನಿ ಮ್ಯಾಕ್ ಡೊನಾಲ್ಡ್  ಮಾಲೀಕರು  ಮೊದಲು ಡಾಬಾ ನಡೆಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು.ರಾಹುಲ್ ಗಾಂಧಿ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com