ರೈತರ ಆತ್ಮಹತ್ಯೆ ಡಬಲ್ ಆಗಿದೆ, ಆದಾಯ ಅಲ್ಲ: ಪ್ರಧಾನಿ ಮೋದಿಗೆ ಶಿವಸೇನೆ ಟಾಂಗ್

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ, ಕೇವಲ ರೈತರ ಆತ್ಮಹತ್ಯೆ...
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ, ಕೇವಲ ರೈತರ ಆತ್ಮಹತ್ಯೆ ಡಬಲ್ ಆಗಿದೆ. ಅವರ ಆದಾಯ ಡಬಲ್ ಆಗಿಲ್ಲ ಎಂದು ಶುಕ್ರವಾರ ಹೇಳಿದೆ.
ಕಳೆದ ಬುಧವಾರ ದೇಶದ 600 ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ಮೋದಿ, 2022ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡುವ ಗುರಿ ನಮ್ಮ ಸರ್ಕಾರಕ್ಕೆ ಇದೆ. ಹೀಗಾಗಿಯೇ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ 2.12 ಲಕ್ಷ ಕೋಟಿ ರುಪಾಯಿ ಹಣ ಮೀಸಲಿರಿಸಿದ್ದೇವೆ ಎಂದು ಹೇಳಿದ್ದರು.
ಪ್ರಧಾನಿ ಮೋದಿಯ ಈ ಹೇಳಿಕೆಯನ್ನು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಸ್ತಾಪಿಸಿದ್ದು, ಇಂತಹ ಕೊನೆಯಿಲ್ಲದ ಘೋಷಣೆ ಮತ್ತು ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ದೇಶ ಸುಸ್ತಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿ ಕಳೆದ ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿಯ ಭರವಸೆಗಳನ್ನು ನೀಡಿದ್ದರು. ಈಗ ಮತ್ತೆ ಅದೇ ಹಳೆ ಕ್ಯಾಸೆಟ್ ಹಾಕುತ್ತಿದ್ದಾರೆ ಎಂದು ಸಾಮ್ನಾ ಸಂಪಾದಕೀಯ ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com