ಕೇರಳ ಮುಖ್ಯಮಂತ್ರಿ ಪ್ರಧಾನಿ ಭೇಟಿಗೆ ನಾಲ್ಕನೇ ಬಾರಿಯೂ ಅನುಮತಿ ನಿರಾಕರಣೆ

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗಲು ನಾಲ್ಕನೇ ಬಾರಿಯೂ ಪ್ರಧಾನಮಂತ್ರಿ ಕಾರ್ಯಾಲಯದಿಂದ ಅನುಮತಿಯನ್ನು ನಿರಾಕರಿಸಲಾಗಿದೆ.
ಮುಖ್ಯಮಂತ್ರಿ ಪಿಣರಾಯ್ ವಿಜಯನ್
ಮುಖ್ಯಮಂತ್ರಿ ಪಿಣರಾಯ್ ವಿಜಯನ್
ನವದಹೆಲಿ: ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು  ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗಲು ನಾಲ್ಕನೇ ಬಾರಿಯೂ ಪ್ರಧಾನಮಂತ್ರಿ ಕಾರ್ಯಾಲಯದಿಂದ ಅನುಮತಿಯನ್ನು ನಿರಾಕರಿಸಲಾಗಿದೆ.
ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹಾಗೂ ಸರ್ವ ಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿ ಕಾರ್ಯಾಲಯ  ಅನುಮತಿ ನೀಡಲು ನಿರಾಕರಿಸಿದೆ ಎಂದು  ಪಿಣರಾಯ್ ವಿಜಯನ್ ಅವರ ಕಚೇರಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
 ಆಹಾರ ಧಾನ್ಯ ಹಂಚಿಕೆಯಲ್ಲಿ ತಾರತಾಮ್ಯ  ಕುರಿತಂತೆ ಪ್ರಧಾನಿ ಜೊತೆಗೆ ಚರ್ಚಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಅಗತ್ಯವಿದ್ದರೆ,  ಕೇಂದ್ರ ಆಹಾರ ಮತ್ತು ಪಡಿತರ ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವನ್ ಅವರನ್ನು ಭೇಟಿಯಾಗುವಂತೆ  ಪ್ರಧಾನಮಂತ್ರಿ ಕಾರ್ಯಾಲಯ ಪ್ರತಿಕ್ರಿಯಿಸಿದೆ.
ಇದೇ ವಿಷಯ ಕುರಿತು ಚರ್ಚಿಸಲು ಕಳೆದ ವಾರ ಕೂಡಾ ವಿಜಯನ್ ಪಿಣರಾಯ್  ಪ್ರಧಾನಮಂತ್ರಿ ಭೇಟಿಯಾಗಲು ಅನುಮತಿ ಕೇಳಿದ್ದರು. ಇದಕ್ಕೂ ಮುಂಚೆ ಮಾರ್ಚ್ 20, 2017 ರಂದು  ಬಜೆಟ್ ನಲ್ಲಿ ರಾಜ್ಯಕ್ಕೆ ಸೂಕ್ತ ಅನುದಾನ ನೀಡುವಂತೆ ಒತ್ತಾಯಿಸಲು ಪ್ರಧಾನಮಂತ್ರಿ ಭೇಟಿಯಾಗಲು ಪಿಣರಾಯ್ ಬಯಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com