ಭಾರತೀಯ ಯಾತ್ರಿಗಳನ್ನು ಭೇಟಿ ಮಾಡಲು ನಿರ್ಬಂಧ: ಪಾಕ್ ಉಪ ಹೈಕಮಿಷನರ್ ಗೆ ಸಮನ್ಸ್

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಹಾಗು ಅಲ್ಲಿಗೆ ಭೇಟಿ ನೀಡಿರುವ ಯಾತ್ರಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ನೀರಾಕರಿಸಿದ್ದರಿಂದ
ಭಾರತೀಯ ಯಾತ್ರಿಗಳನ್ನು ಭೇಟಿ ಮಾಡಲು ನಿರ್ಬಂಧ: ಪಾಕ್ ಉಪ ಹೈಕಮಿಷನರ್ ಗೆ ಸಮನ್ಸ್
ಭಾರತೀಯ ಯಾತ್ರಿಗಳನ್ನು ಭೇಟಿ ಮಾಡಲು ನಿರ್ಬಂಧ: ಪಾಕ್ ಉಪ ಹೈಕಮಿಷನರ್ ಗೆ ಸಮನ್ಸ್
Updated on: 
ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಹಾಗು ಅಲ್ಲಿಗೆ ಭೇಟಿ ನೀಡಿರುವ ಯಾತ್ರಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ನೀರಾಕರಿಸಿದ್ದರಿಂದ ಭಾರತದಲ್ಲಿರುವ ಪಾಕಿಸ್ತಾನ ಉಪ ಹೈಕಮಿಷನರ್ ಗೆ ಭಾರತ ಸರ್ಕಾರ ಸಮನ್ಸ್ ಜಾರಿ ಮಾಡಿದೆ. 
ಭಾರತದ ರಾಯಭಾರಿ ಕಚೇರಿ ಅಧಿಕಾರಿಗೆ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಅನುಮತಿ ನಿರಾಕರಿಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತ ವಿದೇಶಾಂಗ ಇಲಾಖೆ ಈ ವಿಷಯವನ್ನು ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸುವುದಾಗಿ ಹೇಳಿತ್ತು. ಈ ಬೆನ್ನಲ್ಲೆ ಪಾಕಿಸ್ತಾನದ ಉಪ ಹೈಕಮಿಷನರ್ ಗೆ ಸಮನ್ಸ್ ಜಾರಿಗೊಳಿಸಿದೆ. 
ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಮುಂಚೆಯೇ ಎಲ್ಲಾ ಅನುಮತಿಗಳನ್ನು ಪಡೆದುಕೊಂಡಿದ್ದರೂ ಸಹ ಅಜಯ್ ಬಿಸಾರಿಯಾ ಹಾಗೂ ಅವರ ಪತ್ನಿಗೆ ಅನುಮತಿ ನಿರಾಕರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com