ಪಶ್ಚಿಮ ಬಂಗಾಳ: ಒಂದೇ ಆವರಣದಲ್ಲಿ ದೇವಸ್ಥಾನ, ಮಸೀದಿ ನಿರ್ಮಿಸಿ ಕೋಮು ಸಾಮರಸ್ಯ ಮೆರೆದ ಜನ

ಪಶ್ಚಿಮ ಬಂಗಾಳದ ಜಾರ್ಗಗ್ರಾಮ್ ಎಂಬ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಒಂದೇ ಸ್ಥಳದಲ್ಲಿ ಮಸೀದಿ ಮತ್ತು ದೇವಾಲಯಗಳಿದ್ದು ಅಲ್ಲಿನ ಜನ ಕೋಮು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜರ್ಗಾಗ್ರಾಮ್: ಪಶ್ಚಿಮ ಬಂಗಾಳದ ಜಾರ್ಗಗ್ರಾಮ್ ಎಂಬ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಒಂದೇ ಸ್ಥಳದಲ್ಲಿ ಮಸೀದಿ ಮತ್ತು ದೇವಾಲಯಗಳಿದ್ದು ಅಲ್ಲಿನ ಜನ ಕೋಮು ಸೌಹಾರ್ಧತೆ ಮೆರೆದಿದ್ದಾರೆ,
ಇಲ್ಲಿ ಹಿಂದೂಗಳು ಶಿವನನ್ನು ಪೂಜಿಸುತ್ತಾರೆ ಹಾಗೂ ಮುಸಲ್ಮಾನರು ಪವಿತ್ರ ಖುರಾನ್ ಗ್ರಂಥವನ್ನು ಇಲ್ಲಿ ಪಠಿಸುತ್ತಾರೆ,  ನಾರಾಯಣ ಚಂದ್ರ ಆಚಾರ್ಯ ಎಂಬ ಬ್ರಾಹ್ಮಣ ವ್ಯ.ಕ್ತಿಗೆ ಈ ಜಾಗದ  ಕೇರ್ ಟೇಕರ್ ಆಗಿದ್ದಾರೆ.
ನಾವೆಲ್ಲರೂ ದೇವರ ಮಕ್ಕಳು.  ಸತ್ತ ಮೇಲೆ ನಾವೆಲ್ಲರು ದೇವರ ಬಳಿ ಹೋಗುತ್ತೇವೆ. ಇಲ್ಲಿ ಧರ್ಮಗಳ ಮಧ್ಯೆ ಯಾವುದೇ ತಾರತಮ್ಯವಿಲ್ಲ, ಎರಡು ಸಮುದಾಯದವರು ಭಜನೆ ಮಾಡುತ್ತಾರೆ, ಹಾಗೆಯೇ ಖುರಾನ್ ಪಠಿಸುತ್ತಾರೆ ಎಂದು ಅವರು ಹೇಳಿದ್ದಾರೆ,
ನಾವು ಕಾಳಿ ಮಾತೆಯನ್ನು ನೋಡುತ್ತೇವೆ ಹಾಗೆಯೇ ನಮಾಜ್ ಕೂಡ ಮಾಡುತ್ತೇವೆ, ಪ್ರತಿದಿನ ನಾನು ಇಲ್ಲಿಗೆ ನನ್ನ ಕುಟುಂಬದ ಜೊತೆ ಬರುತ್ತೇನೆ ಎಂದು ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಕಳೆದ ಹಲವು ದಶಕಗಳಿಂದ ನಮ್ಮ ಎರಡು ಸಮುದಾಯಗಳ ದೈವ ಆರಾಧನೆಯ ಸ್ಥಳ ಒಂದೇ ಜಾಗದಲ್ಲಿದ್ದು ಇದುವರೆಗೂ ಯಾವುದೇ ಘರ್ಷಣೆ ಸಂಭವಿಸಿಲ್ಲ, 
ನಾನು ನನ್ನ ಜೀವನದಲ್ಲಿ ಒಂದೇ ಸ್ಥಳದಲ್ಲಿ ಶಿವ ಬಾಬಾ ಹಾಗೂ ಫಕೀರ್ ಬಾಬಾ ಒಟ್ಟಿಗೆ ಇರುವುದನ್ನು ಎಲ್ಲಿಯೂ ನೋಡಿಲ್ಲ, ಇದೇ ರೀತಿ  ಇಡಿ ಪ್ರಪಂಚದಲ್ಲಿ ಆಗಬೇಕು, ಆಗ ಮಾತ್ರ ನಾವೆಲ್ಲರೂ ನೆಮ್ಮದಿ ಹಾಗೂ ಶಾಂತಿಯಿಂದ ಬಾಳಲು ಸಾಧ್ಯ ಎಂದು ಹಿಂದೂ ಭಕ್ತರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com