ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸಿಪಿಐ-ಎಂ
ದೇಶ
ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸಿಪಿಐ-ಎಂ
ಜನಸಾಮಾನ್ಯನ ಸಾಂವಿಧಾನಿಕ ಹಕ್ಕನ್ನು ನಿರ್ಭಯವಾಗಿ ಉಲ್ಲಂಘಿಸಲು ಅವಕಾಶ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಿಪಿಐ-ಎಂ ಆರೋಪಿಸಿದೆ.
ನವದೆಹಲಿ: ಜನಸಾಮಾನ್ಯನ ಸಾಂವಿಧಾನಿಕ ಹಕ್ಕನ್ನು ನಿರ್ಭಯವಾಗಿ ಉಲ್ಲಂಘಿಸಲು ಅವಕಾಶ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಿಪಿಐ-ಎಂ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಆಡಳಿತದ 4 ವರ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐ-ಎಂ, ಮೋದಿ ಆಡಳಿತಾವಧಿಯಲ್ಲಿ ಹಿಂದೆಂದೂ ನಡೆಯದೇ ಇರುವ ರೀತಿಯಲ್ಲಿ ಜನರ ನಡುವೆ ಧೃವೀಕರಣವಾಗಿದೆ. ಮುಸ್ಲಿಮರು, ದಲಿತರ ಮೇಲೆ ದಾಳಿ ನಡೆದಿದೆ. ಸಾಂವಿಧಾನ, ಸಂಸತ್ ನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಪಿಐ-ಎಂ ಆರೋಪಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು ಬಿಜೆಪಿ ಆಡಳಿತವಿರುವ ಪ್ರದೇಶಗಳಲ್ಲಿ ದೇಶಾದ್ಯಂತ ಹಿಂಸಾಚಾರಗಳು ನಡೆದಿವೆ ಎಂದು ಸಿಪಿಐ-ಎಂ ಪ್ರಧಾನಿ ಮೋದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ