ಮಹಾ ಪ್ಲ್ಯಾಸ್ಟಿಕ್ ನಿಷೇಧ: ಕಿರಾಣಿ ಅಂಗಡಿಗಳಲ್ಲಿ ಶೇ.50 ರಷ್ಟು ಕುಗ್ಗಿದ ವ್ಯಾಪಾರ

ಕಳೆದ ಶನಿವಾರದಿಂದ ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿರುವ ಪ್ಲ್ಯಾಸ್ಟಿಕ್ ನಿಷೇಧ ಕಿರಾಣಿ ಅಂಗಡಿಗಳ ಮೇಲಿನ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ.
ಮಹಾ ಪ್ಲ್ಯಾಸ್ಟಿಕ್ ನಿಷೇಧ: ಕಿರಾಣಿ ಅಂಗಡಿಗಳಲ್ಲಿ ಶೇ.50 ರಷ್ಟು ಕುಗ್ಗಿದ ವ್ಯಾಪಾರ
ಮಹಾ ಪ್ಲ್ಯಾಸ್ಟಿಕ್ ನಿಷೇಧ: ಕಿರಾಣಿ ಅಂಗಡಿಗಳಲ್ಲಿ ಶೇ.50 ರಷ್ಟು ಕುಗ್ಗಿದ ವ್ಯಾಪಾರ
ಮುಂಬೈ: ಕಳೆದ ಶನಿವಾರದಿಂದ ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿರುವ ಪ್ಲ್ಯಾಸ್ಟಿಕ್ ನಿಷೇಧ ಕಿರಾಣಿ ಅಂಗಡಿಗಳ ಮೇಲಿನ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. 
ಪ್ಯಾಕಿಂಗ್ ಗೆ ಪರ್ಯಾಯವಾದ ಮಾರ್ಗಗಳಿಲ್ಲದೇ ಕಿರಾಣಿ ಅಂಗಡಿಗಳಲ್ಲಿನ ವ್ಯಾಪಾರ ಶೇ.50 ರಷ್ಟು ಕುಗ್ಗಿದೆ ಎಂದು ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘಟನೆಯ ಒಕ್ಕೂಟ ಹೇಳಿದೆ. ಮಹಾರಾಷ್ಟ್ರದಾದ್ಯಂತ 3 ಲಕ್ಷಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಲ್ಲಿನ ವ್ಯಾಪಾರದ ಮೇಲೆ ಪ್ಲ್ಯಾಸ್ಟಿಕ್ ನಿಷೇಧ ಪರಿಣಾಮ ಬೀರಿದ್ದು ಶೇ.50 ರಷ್ಟು ವ್ಯಾಪಾರ ಕುಗ್ಗಿದೆ ಎಂದು ಸಂಘಟನೆಯ ಅಧ್ಯಕ್ಷ ವಿರೇನ್ ಶಾ ಹೇಳಿದ್ದಾರೆ. 
ಯಾವ ವಿಧದ ಪ್ಲ್ಯಾಸ್ಟಿಕ್ ಬ್ಯಾಗ್ ಗಳನ್ನು ಬಳಕೆ ಮಾಡಬಹುದಾಗಿದೆ ಎಂಬ ಬಗ್ಗೆ ರಾಜ್ಯಾಡಳಿತ ಮಾಹಿತಿಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದ್ದರಿಂದ ಈ ಗೊಂದಲ ನಿರ್ಮಾಣವಾಗಿದೆ ಎಂದು ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘಟನೆಯ ಒಕ್ಕೂಟ ತಿಳಿಸಿದೆ. ಪ್ಲ್ಯಾಸ್ಟಿಕ್ ಬ್ಯಾಗ್ ಗಳನ್ನು ಕೊಂಡೊಯ್ಯುವ ವ್ಯಕ್ತಿಗೆ 5,000 ರೂ ದಂಡ ವಿಧಿಸಲಾಗುತ್ತದೆ, ಎರಡನೇ ಬಾರಿಗೆ ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂಪಾಯಿ, ಮೂರನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com