ತನ್ನ ಕುಟುಂಬದ ಬೆದರಿಕೆಗೆ ಬಗ್ಗದೆ ಹಸು ಸಾಕಣೆ ಕೇಂದ್ರ ನಡೆಸುತ್ತಿರುವ ಮುಸ್ಲಿಮ್ ಮಹಿಳೆ

ಮುಸ್ಲಿಮ್ ಮಹಿಳೆಯೊಬ್ಬಳು ಹಸುವಿನ ಸಾಕಣಾ ಕೇಂದ್ರ ನಡೆಸುತ್ತಿರುವ ಕಾರಣ ಆಕೆಯ ಕುಟುಂಬದವರು ಸೇರಿದಂತೆ ಕೆಲ ಹೊರಗಿನ ವ್ಯಕ್ತಿಗಳಿಂದ ಬೆದರಿಕೆಗಳನ್ನು ಎದುರಿಸುತ್ತಿರುವ ಘಟನೆ.....
ತನ್ನ ಕುಟುಂಬದ ಬೆದರಿಕೆಗೆ ಬಗ್ಗದೆ ಹಸು ಸಾಕಣೆ ಕೇಂದ್ರ ನಡೆಸುತ್ತಿರುವ ಮುಸ್ಲಿಮ್ ಮಹಿಳೆ
ತನ್ನ ಕುಟುಂಬದ ಬೆದರಿಕೆಗೆ ಬಗ್ಗದೆ ಹಸು ಸಾಕಣೆ ಕೇಂದ್ರ ನಡೆಸುತ್ತಿರುವ ಮುಸ್ಲಿಮ್ ಮಹಿಳೆ
ಭೋಪಾಲ್(ಮಧ್ಯ ಪ್ರದೇಶ): ಮುಸ್ಲಿಮ್ ಮಹಿಳೆಯೊಬ್ಬಳು ಹಸುವಿನ ಸಾಕಣಾ ಕೇಂದ್ರ ನಡೆಸುತ್ತಿರುವ ಕಾರಣ ಆಕೆಯ ಕುಟುಂಬದವರು ಸೇರಿದಂತೆ ಕೆಲ ಹೊರಗಿನ ವ್ಯಕ್ತಿಗಳಿಂದ ಬೆದರಿಕೆಗಳನ್ನು ಎದುರಿಸುತ್ತಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹಸುವಿನ ಸಾಕಣೆ ನಡೆಸುತ್ತಿರುವ ಮಹಿಳೆ ತನ್ನ ಮನೆಯಿಂದ 500 ಕಿಮೀ ದೂರದಲ್ಲಿರುವ ನೀಮಚ್ ಎನ್ನುವಲ್ಲಿ ಪಶು ಸಾಕಣಾ ಕೇಂದ್ರ ನಡೆಸಿದ್ದು ಇದನ್ನು ತಕ್ಷಣ ನಿಲ್ಲಿಸುವಂತೆ ಆಕೆಯ ಕುಟುಂಬವು ಬೆದರಿಕೆ ಹಾಕುತ್ತಿದೆ. ಮುಸ್ಲಿಮ್ ಮಹಿಳೆ ’ಹಸುವಿನ ರಕ್ಷಕಿ’ಯಾಗಿದ್ದಾಳೆಂದು ಕುಟುಂಬ ಅವಳ ವಿರುದ್ಧ ತಿರುಗಿ ಬಿದ್ದಿದೆ. ಆದರೆ ತಾನು ಹಸುಗಳ ಪೋಷಣೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
ಮಧ್ಯಪ್ರದೇಶದ ರಾಷ್ಟ್ರೀಯ ಹಸು ಸೇವಾ ಕಾರ್ಪ್ ನ ರಾಜ್ಯಾಧ್ಯಕ್ಷೆಯಾಗಿರುವ ಮೆಹ್ರುನ್ನೀಸಾ ಖಾನ್ ಈರೀತಿ ಬೆದರಿಕೆ ಎದುರಿಸುತ್ತಿರುವ ಮಹಿಳೆ. ಈಕೆಯ ಪತಿ ಹಾಗೂ ಸೋದರ ಸಂಬಂಧಿಗಳಿಂದ ಆಕೆಗೆ ಬೆದರಿಕೆಗಳು ಬರುತ್ತಿದೆ.ಇದಲ್ಲದೆ ಆಕೆಯ ಪೋಷಕರು ಹಾಗೂ ಆಕೆಯ ಮಗಳು ಸಹ ಅವಳ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ್ದಾರೆ.
"ನಾನು ಈ ಸಂಘಟನೆ ಸೇರಿದಂದಿನಿಂದ ಕೇವಲ ಹೊರಗಿನವರಷ್ಟೇ ಅಲ್ಲ, ನನ್ನ ಕುಟುಂಬದಿಂದಲೂ ಬೆದರಿಕೆ ಎದುರಿಸುತ್ತಿದ್ದೇನೆ. ನಾನು ಅವರಿಂದ ದೂರ ಬಂದಿದ್ದರೂ ಸಹ ಅವರು ತಮ್ಮ ಕುಟುಂಬಕ್ಕೆ ನಾನು ’ಅಪಖ್ಯಾತಿ’ ತರುತ್ತಿದ್ದೇನೆ ಎಂದು ವಾದಿಸುತ್ತಿದ್ದಾರೆ.ಮೂಕ ಪ್ರಾಣಿಗಳ ಪೋಷಣೆ ಅವರಿಗೆ ಹೇಗೆ ಅಪಖ್ಯಾತಿಯನ್ನು ತರುತ್ತದೆ ಎನ್ನುವುದು ನನಗೆ ತಿಳಿದಿಲ್ಲ" ಎ ಎನ್ ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಮೆಹ್ರುನ್ನೀಸಾ ಹೇಳಿದ್ದಾರೆ.
ಏತನ್ಮಧ್ಯೆ ಮಹಿಳೆಯ ಈ ಕಾರ್ಯಕ್ಕೆ ಸಹಕಾರ ನಿಡುತ್ತಿರುವ ಮದನ್ ಓಝಾ "ಹಸುಗಳ ಪೋಷಣೆಯನ್ನು ಕೋಮುವಾದದ ದೃಷ್ಟಿಯಿಂದ ಕಾಣಬಾರದು" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com