ವಿದ್ಯಾರ್ಥಿ ವೀಸಾಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಯಾರೂ ಸಂಪರ್ಕಿಸಿಲ್ಲ: ಬ್ರಿಟೀಷ್ ರಾಯಭಾರಿ ಅಧಿಕಾರಿ

ಬ್ರಿಟನ್ ಪ್ರಕಟಿಸಿರುವ ಹೊಸ ವೀಸಾ ನಿಯಮದ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ವೀಸಾ ಪಡೆಯುವುದು ಕಠಿಣವಾಗಿದೆ.
ವಿದ್ಯಾರ್ಥಿಗಳ ವೀಸಾಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಯಾರೂ ಸಂಪರ್ಕಿಸಿಲ್ಲ: ಬ್ರಿಟೀಷ್ ರಾಯಭಾರಿ ಅಧಿಕಾರಿ
ವಿದ್ಯಾರ್ಥಿಗಳ ವೀಸಾಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಯಾರೂ ಸಂಪರ್ಕಿಸಿಲ್ಲ: ಬ್ರಿಟೀಷ್ ರಾಯಭಾರಿ ಅಧಿಕಾರಿ
ನವದೆಹಲಿ: ಬ್ರಿಟನ್ ಪ್ರಕಟಿಸಿರುವ ಹೊಸ ವೀಸಾ ನಿಯಮದ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ವೀಸಾ ಪಡೆಯುವುದು ಕಠಿಣವಾಗಿದೆ. ಈ ಬಗ್ಗೆ ಬ್ರಿಟನ್ ನ ರಾಯಭಾರಿ ಕಚೇರಿ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ವೀಸಾ ನಿಯಮಗಳ ಬಗ್ಗೆ ಭಾರತ ಸರ್ಕಾರದಿಂದ ಯಾವ ಅಧಿಕಾರಿಯೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. 
ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತದಲ್ಲಿರುವ ಬ್ರಿಟೀಷ್ ಹೈಕಮಿಷನರ್  ಸರ್ ಡೊಮಿನಿಕ್ ಅಸ್ಕ್ವಿತ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.  ವಿದ್ಯಾರ್ಥಿಗಳು ಬ್ರಿಟನ್ ವೀಸಾ ಪಡೆಯುವುದು ನೂತನ ವೀಸಾ ನಿಯಮಗಳಲ್ಲಿ ಕಠಿಣವಾಗಿರುವುದಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ನಮ್ಮನ್ನು  ಈವರೆಗೂ ಸಂಪರ್ಕಿಸಿಲ್ಲ ಎಂದಿದ್ದಾರೆ. ಕಳೆದ ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಯಾವೆಲ್ಲಾ ನಿಯಮಗಳು ಇತ್ತೋ ಅದೇ ನಿಯಮಗಳನ್ನು ನೂತನ ವೀಸಾ ನೀತಿಯಲ್ಲೂ ಮುಂದುವರೆಸಲಾಗಿದೆ ಎಂದು ಸರ್ ಡೊಮಿನಿಕ್ ಅಸ್ಕ್ವಿತ್ ತಿಳಿಸಿದ್ದಾರೆ. 
ಬ್ರಿಟೀಷ್ ಸ್ನಾತಕೋತ್ತರ ಪದವಿಗಳಿಗೆ ಭಾರತದಲ್ಲಿ ಮಾನ್ಯತೆಯೇ ಇಲ್ಲ. ಬ್ರಿಟನಿಂದ ಸ್ನಾತಕೋತ್ತರ ಪದವಿ ಪಡೆದು ಬರುವ 14,000 ವಿದ್ಯಾರ್ಥಿಗಳ ಪದವಿಗಳಿಗೆ ಭಾರತದಲ್ಲಿ ಮಾನ್ಯತೆಯೇ ಇಲ್ಲ. ಈ ಬಗ್ಗೆ ಯಾರೂ ಮಾತನಾಡದೇ ಇರುವುದು ಅಚ್ಚರಿ ಮೂಡಿಸುತ್ತದೆ ಎಂದು ಸರ್ ಡೊಮಿನಿಕ್ ಅಸ್ಕ್ವಿತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com