ರಾಜಸ್ಥಾನ: ಬಿಜೆಪಿ ತೊರೆದ ಹಿರಿಯ ಶಾಸಕ, ಕೇಂದ್ರ, ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ

ರಾಜಸ್ಥಾನ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಘನಶ್ಯಾಮ್‌ ತಿವಾರಿ ಅವರು ಸೋಮವಾರ ಭಾರತೀಯ...
ಘನಶ್ಯಾಮ್ ತಿವಾರಿ
ಘನಶ್ಯಾಮ್ ತಿವಾರಿ
ಜೈಪುರ: ರಾಜಸ್ಥಾನ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಘನಶ್ಯಾಮ್‌ ತಿವಾರಿ ಅವರು ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಆದರೆ ಆರ್ ಎಸ್ ಎಸ್ ಜೊತೆ ಮುಂದುವರೆಯುವುದಾಗಿ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜಿನಾಮೆ ಪತ್ರ ಬರೆದಿರುವ ತಿವಾರಿ, ತಮ್ಮ ಈ ನಿರ್ಧಾರಕ್ಕೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಕೇಂದ್ರ ನಾಯಕರು ಕಾರಣ ಎಂದು ಹೇಳಿದ್ದಾರೆ.
'ಭಾರತ್‌ ವಾಹಿನಿ ಪಾರ್ಟಿ' ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಹಿರಿಯ ನಾಯಕರು ತಮ್ಮ ಹೊಸ ಪಕ್ಷ ಸೇರಿಕೊಳ್ಳಲಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಬಿಜೆಪಿಯಿಂದ ಆರು ಬಾರಿ ಶಾಸಕರಾಗಿರುವ ತಿವಾರಿ ಅವರು ಈಗ ತಮ್ಮ ನೂತನ ಪಕ್ಷದಿಂದ ಸಂಗನೇರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಪಕ್ಷ ರಾಜ್ಯದ ಎಲ್ಲಾ 200 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ವಸುಂಧರಾ ರಾಜೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದ ತಿವಾರಿ, ರಾಜೇ ಅವರನ್ನು ಕಿತ್ತು ಹಾಕದಿದ್ದರೆ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸೋಲುವುದು ನಿಶ್ಚಿತ ಎಂದಿದ್ದಾರೆ.
ದೇಶದಲ್ಲಿ ಮತ್ತು ರಾಜಸ್ಥಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ವಿರುದ್ಧ ಹೋರಾಡಲು ತಾವು ಹೊಸ ಪಕ್ಷ ಹುಟ್ಟುಹಾಕಿರುವುದಾಗಿ ತಿವಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com