ಸುಪ್ರೀಂ ಕೋರ್ಟ್ ನೂತನ ರೋಸ್ಟರ್ ವ್ಯವಸ್ಥೆ ಜುಲೈ 2ರಿಂದ ಜಾರಿ

ಸುಪ್ರೀಂ ಕೋರ್ಟ್ ನ ಹೊಸ ರೋಸ್ಟರ್ ಪದ್ದತಿಯು ಜುಲೈ 2ರಿಂದ ಜಾರಿಯಾಗಲಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ನ ಹೊಸ ರೋಸ್ಟರ್ ಪದ್ದತಿಯು ಜುಲೈ 2ರಿಂದ ಜಾರಿಯಾಗಲಿದೆ.
ನ್ಯಾಯಮೂರ್ತಿ ಚಲಮೇಶ್ವರ್ ನಿವೃತ್ತಿಯಾದ ಎರಡು ದಿನಗಳ ಬಳಿಕ ಹೊಸ ರೋಸ್ಟರ್ ಪದ್ದತಿ ಜಾರಿಗೆ ಭಾನುವಾರ ಒಪ್ಪಿಗೆ ನೀಡಲಾಗಿದೆ.  ಇದೇ ಮೊದಲ ಬಾರಿಗೆ ಭಾರತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಫೆ. 1ರಿಂದ ರೋಸ್ಟರ್ ಅನ್ನು ಸಾರ್ವಜನಿಕವಾಗಿ ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರು ಸಿಜೆಐ ವಿರುದ್ಧ ಆರೋಪ ಮಾಡಿದ ತರುವಾಯ ಸಿಜೆಐ ದೀಪಕ್ ಮಿಶ್ರಾ ಈ ಕ್ರಮಕ್ಕೆ ಮುಂದಾಗಿದ್ದರು.
ಹೊಸ ರೋಸ್ಟರ್ ನಿಯಮಾವಳಿಯಂತೆ ಸಿಜೆಐ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದ ((ಪಿಐಎಲ್) ಪ್ರಕರಣಗಳನ್ನು ಸಾಮಾಜಿಕ ನ್ಯಾಯ ವಿಷಯಗಳು, ಚುನಾವಣಾ ವಿಷಯಗಳು, ಹೇಬಿಯಸ್ ಕಾರ್ಪಸ್ ಮತ್ತು ನ್ಯಾಯಾಲಯದ ವಿಷಯಗಳ ವಿಚಾರಣೆಗಳನ್ನು ಆಲಿಸಲಿದೆ
ಏತನ್ಮಧ್ಯೆ, ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಭೂ ಸ್ವಾಧೀನ, ಪರಿಸರ  ಅಸಮತೋಲನ, ವನ್ಯಜೀವಿಗಳ ರಕ್ಷಣೆ, ಸಾಮಾಜಿಕ ನ್ಯಾಯ, ಗ್ರಾಹಕ ಹಕ್ಕುಗಳ ರಕ್ಷಣೆ ಇತ್ಯಾದಿ ವಿಚಾರಕ್ಕೆ ಸಂಬಂಧಿಸಿ ಮೊಕದ್ದಮೆಯನ್ನು ಆಲಿಸಲಿದ್ದಾರೆ.  
ನ್ಯಾಯಮೂರ್ತಿ ಜೋಸೆಫ್.ಕುರಿಯನ್ ಕಾರ್ಮಿಕ ನ್ಯಾಯ, ಬಾಡಿಗೆ ಕಾಯ್ದೆ, ಕೌಟುಂಬಿಕ ಕಾನೂನು ಹಾಗೂ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಪ್ರಕರಣವನ್ನು ಆಲಿಸಿಅಲಿದ್ದಾರೆ
ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ನೇರ ಮತ್ತು ಪರೋಕ್ಷ ತೆರಿಗೆ ಪ್ರಕರಣಗಳು, ಚುನಾವಣೆ ಮತ್ತು ನ್ಯಾಯಾಂಗ ಅಧಿಕಾರಿಗಳ ಪ್ರಕರಣಗಳನ್ನು ಕೇಳುವವರಿದ್ದು ಎಸ್.ಎ. ಬೊಬ್ಬೆ ಇಂಜಿನಿಯರಿಂಗ್, ವೈದ್ಯಕೀಯ ಹೊರತಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಪರಿಹಾರ, ಮತ್ತು ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣಗಳನ್ನು  ತೀರ್ಮಾನಿಸಲಿದ್ದಾರೆ
ಜನವರಿ 12 ರಂದು ನಡೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಸಿಜೆಐ ವಿರುದ್ಧ ಸುಪ್ರೀಂ ನ್ಯಾಯಾಧಿಶರಾದ ಮದನ್ ಬಿ.ಲೋಕೂರ್, ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಜೋಸೆಫ್ ಕುರಿಯನ್ .ಸೇರಿ ನಾಲ್ವರು ಭಾಗವಹಿಸಿದ್ದರು. ಅವರು ಬಿ.ಹೆಚ್. ಲೋಯಾ ನಿಗೂಢ ಸಾವಿನ ಕುರಿತಂತೆ ಅವರ 'ಆಯ್ದ' ಪ್ರಕರಣಗಳ ಹಂಚಿಕೆ ಕುರಿತುಅಸಮಾಧಾನ ಹೊರಹಾಕಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com