ತುರ್ತು ಪರಿಸ್ಥಿತಿ ಜಾರಿಗೆ ಇಂದಿರಾ ಗಾಂಧಿ ವಿಷಾದ ವ್ಯಕ್ತಪಡಿಸಿದ್ದರು: ಕಾಂಗ್ರೆಸ್

ತುರ್ತು ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿಯ ಟೀಕೆಗಳಿಗೆ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.ತುರ್ತು ಪರಿಸ್ಥಿತಿ ಅಸಾಮಾನ್ಯವಾಗಿದ್ದು, ಇಂದಿರಾಗಾಂಧಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಆನಂದ್ ಶರ್ಮಾ
ಆನಂದ್ ಶರ್ಮಾ
ನವದೆಹಲಿ: ತುರ್ತು ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿಯ ಟೀಕೆಗಳಿಗೆ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ತುರ್ತು ಪರಿಸ್ಥಿತಿಯ 43 ನೇ ವಾರ್ಷಿಕ ದಿನದ ಹಿನ್ನೆಲೆಯಲ್ಲಿ  ಬಿಜೆಪಿ ಸಭೆಯಲ್ಲಿ ಮಾತನಾಡಿದ ನರೇಂದ್ರಮೋದಿ , ಒಂದು ಕುಟುಂಬದ ರಕ್ಷಣೆಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ  ಬಳಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ಈ ಸಂಬಂಧ  ಇಂದು ಸರಣಿ ಟ್ವಿಟ್ ಮೂಲಕ ಆನಂದ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಆಕೆಯ ಅವಧಿಯಲ್ಲಿ ಇಂದಿರಾಗಾಂಧಿ ಬಹುದೊಡ್ಡ ನಾಯಕರಾಗಿದ್ದು, ಚುನಾಯಿತ  ಪ್ರಧಾನಿಯಾಗಿದ್ದರು. ಅರುಣ್ ಜೇಟ್ಲಿ ಆಕೆಯನ್ನು ಇಂದಿರಾಗಾಂಧಿಗೆ ಹೋಲಿಕೆ ಮಾಡಿರುವುದು ಅಸಂಬದ್ಧ, ಅತಿರೇಕದಿಂದ ಕೂಡಿದ್ದು, ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
 ಇಂದಿರಾಗಾಂಧಿ ಚುನಾಯಿತ ಸರ್ಕಾರವನ್ನು ಅಸಂವಿಧಾನಿಕ ಮತ್ತು ಅಪ್ರಜಾಸತಾತ್ಮಕ ವಿಧಾನಗಳಿಂದ ಆಸ್ಥಿರಗೊಳಿಸಬೇಕಾಗಿತ್ತು.  ತುರ್ತು ಪರಿಸ್ಥಿತಿ ಅಸಾಮಾನ್ಯವಾಗಿದ್ದು, ಇಂದಿರಾಗಾಂಧಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದ್ದಾರೆ.
 ಸರ್ವಾಧಿಕಾರಿಗಳು ಚುನಾವಣೆ ನಡೆಸುವುದಿಲ್ಲ. ಅರುಣ್ ಜೇಟ್ಲಿ ನೆನಪಿನ ಶಕ್ತಿ ಕುಂದಿದೆ. ಇಂದಿರಾಗಾಂಧಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಯನ್ನು ಬಿಜೆಪಿ ನೆನಪು ಮಾಡಿಕೊಳ್ಳಬೇಕಾಗಿದೆ. ಆಕೆ. ಸೋಲು , ಗೆಲುವನ್ನು  ಮಾನವೀಯತೆಯಿಂದ  ಸ್ವೀಕರಿಸುತ್ತಿದ್ದರು ಎಂದು ಆನಂದ್ ಶರ್ಮಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1980ರ ಸಂದರ್ಭದಲ್ಲಿ ದೇಶದ ಜನತೆ ಇಂದಿರಾಗಾಂಧಿಯನ್ನು ಬಹುಮತದೊಂದಿಗೆ  ಗೆಲುವು ದೊರಕಿಸಿ  ವಿರೋಧಿಗಳ ಹೇಳಿಕೆಯನ್ನು ಕಸದ ತೊಟ್ಟಿಯಲ್ಲಿ ಹಾಕಿದ್ದಾರೆ .ಇಂದಿನ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು  ಪ್ರಧಾನಿ ಅವರ ಸೊಕ್ಕಿನ ಸರ್ಕಾರದ ನಿಯಂತ್ರಣದಲ್ಲಿವೆ ಎಂದು ಆರೋಪಿಸಿದರು.
ಇಂದಿರಾಗಾಂಧಿ ಅವರ ತ್ಯಾಗ, ಧೈರ್ಯ ಮತ್ತು ಕೊಡುಗೆ ಇತಿಹಾಸದಲ್ಲಿ ದಾಖಲಾಗಿದೆ.  ಎರಡನೇ ವಿಶ್ವಯುದ್ಧ ನಂತರ ಬಾಂಗ್ಲಾ ವಿಮೋಚನೆ ಭಾರತೀಯ ಸೇನೆಗೆ  ಸಂದ ಬಹುದೊಡ್ಡ ಜಯ. ಭಾರತ ಪರಮಾಣು ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಶಕ್ತಿ ಪಡೆಯುವಂತಾಯಿತು ಎಂದು ಅವರು ನೆನಪು ಮಾಡಿದ್ದಾರೆ.
ಬಿಜೆಪಿ , ಆರ್ ಎಸ್ ಎಸ್ ಅವರ ಕೊಡುಗೆ ಹಾಗೂ ತ್ಯಾಗವನ್ನು  ಅವಮಾನಿಸಬಾರದು, ಆಕೆಯನ್ನು ದೇಶದ ಜನತೆ ಹಿರೋ ಎಂದೇ ನೆನಪು ಮಾಡಿಕೊಳ್ಳುತ್ತಾರೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com