ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಎಫ್ಎಂ ರೇಡಿಯೋ ಚಾನಲ್ ಗಳಲ್ಲಿಯೂ ಪ್ರಸಾರ ಮಾಡಲಾಗುವುದು ಎಂದು ಕಿರಣ್ ಬೇಡಿ ಎಚ್ಚರಿಕೆ ನೀಡಿದ್ದಾರೆ. ವಿವಿಧ ವರ್ಗದ ವಿದ್ಯುತ್ ಬಳಕೆದಾರರು ತಿಂಗಳುಗಳಿಂದ ಪಾವತಿ ಮಾಡದೇ ಉಳಿಸಿಕೊಂಡಿರುವ ವಿದ್ಯುತ್ ಬಿಲ್ 120 ಕೋಟಿ ರೂಪಾಯಿಯಷ್ಟಾಗಿದೆ.