ಬುಖಾರಿ ಹತ್ಯೆ: ವಿವರಣೆ ಕೋರಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಎನ್ಎಚ್ಆರ್ಸಿ ನೋಟೀಸ್

ಶುಜಾತ್ ಬುಖಾರಿ ಹತ್ಯೆ ಸಂಬಂಧ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ...
ಶುಜಾತ್ ಬುಖಾರಿ
ಶುಜಾತ್ ಬುಖಾರಿ
ನವದೆಹಲಿ: ಶುಜಾತ್ ಬುಖಾರಿ ಹತ್ಯೆ ಸಂಬಂಧ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ ನೋಟೀಸ್  ನೀಡಿದೆ.
ಜೂನ್ 14 ರಂದು ಹಿರಿಯ ಪತ್ರಕರ್ತ ಮತ್ತು 'ರೈಸಿಂಗ್ ಕಾಶ್ಮೀರ' ಸಂಪಾದಕ ಬುಖಾರಿ ಶ್ರೀನಗರ ಪ್ರೆಸ್ ಕಾಲೋನಿ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದರು.
ಬುಖಾರಿ ಹತ್ಯೆ ಸಂಬಂಧ ತ್ವರಿತ ತನಿಖೆ ಅಗತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಆಯೋಗವು ಕಾಶ್ಮೀರದಲ್ಲಿ ಕಳೆದೆರಡು ವರ್ಷಗಳಲ್ಲಿ ಮಾದ್ಯಮದವರ ಮೇಲೆ ನಡೆದ  ದಾಳಿಯ ವಿವರಗಳನ್ನು ಒದಗಿಸಲು ರಾಜ್ಯ ಸರ್ಕಾರವನ್ನು ಕೇಳಿದೆ.
ಅಲ್ಲದೆ ಸಾವನ್ನಪ್ಪಿದ ಪತ್ರಕರ್ತರು, ಮಾದ್ಯಮ ವೃತ್ತಿನಿರತರ ಕುಟುಂಬಗಳಿಗೆ ಒದಗಿಸಿದ ಪರಿಹಾರ ಅಥವಾ ಪುನರ್ವಸತಿ ವಿವರಗಳನ್ನು ಸಹ ನೀಡುವಂತೆ ಆಯೋಗ ತಿಳಿಸಿದೆ. .
ಬುಖಾರಿ ಪೋಲೀಸ್ ರಕ್ಷಣೆಯಲ್ಲಿದ್ದರೂ ಸಹ ಗುಂಡೇಟಿಗೆ ಬಲಿಯಾಗಿದ್ದಾರೆ. ಕಣಿವೆಯಲ್ಲಿ ಪತ್ರಕರ್ತರ ಜೀವ ಸುರಕ್ಷಿತವಾಗಿಲ್ಲ ಎಂದು ಈ ಘಟನೆಯಿಂದ ಸಾಬೀತಾಗಿದೆ.
"ಇದು ಮಾನವ ಹಕ್ಕುಗಳ ಉಲ್ಲಂಘನೆ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರಕ್ಕೆ ಬೆದರಿಕೆ ಇದೆ" ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com