ರಾಮ ಮಂದಿರ ನಿರ್ಮಾಣಕ್ಕೆ ತೊಗಾಡಿಯಾ ಗಡುವು: ವಿಳಂಬಕ್ಕೆ ಮೋದಿ ವಿರುದ್ಧ ಅಸಮಾಧಾನ

ವಿಶ್ವಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ತೊಗಾಡಿಯಾ
ಪ್ರವೀಣ್ ತೊಗಾಡಿಯಾ
ಲಖನೌ: ವಿಶ್ವಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಬಿಜೆಪಿ ರಾಮನ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ತೊಗಾಡಿಯಾ ಆರೋಪಿಸಿದ್ದು, ಅಕ್ಟೋಬರ್ ತಿಂಗಳಾಂತ್ಯದ ವೇಳೆಗೆ ರಾಮಮಂದಿರ ನಿರ್ಮಾಣ ಪ್ರಾರಂಭಕ್ಕೆ ಗಡುವು ನೀಡಿದ್ದಾರೆ. ಗಡುವು ಮೀರಿದ ನಂತರ ರಾಮಮಂದಿರಕ್ಕಾಗಿ ತೀವ್ರ ಹೋರಾಟ ನಡೆಸುವುದಾಗಿ ತೊಗಾಡಿಯಾ ಎಚ್ಚರಿಸಿದ್ದಾರೆ. 
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಘಟನೆಯನ್ನು ಪ್ರಾರಂಭಿಸಿರುವ ತೊಗಾಡಿಯಾ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಸಂಘಟನೆಯ ಕಾರ್ಯಕರ್ತರು 10 ಕೋಟಿ ಸಹಿಯನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಪ್ರಾರಂಭಿಸುವುದಕ್ಕೆ ಅಕ್ಟೋಬರ್ ವರೆಗೂ ಮೋದಿ ಸರ್ಕಾರಕ್ಕೆ ತೊಗಾಡಿಯಾ ಗಡುವು ವಿಧಿಸಿದ್ದು, ತಪ್ಪಿದಲ್ಲಿ ಚಳುವಳಿ ಪ್ರಾರಂಭಿಸುವುದಾಗಿ ತೊಗಾಡಿಯಾ ಎಚ್ಚರಿಸಿದ್ದಾರೆ. 
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾವು ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆ, ಅಕ್ಟೋಬರ್ ವೇಳೆಗೆ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿಯಾಗದೇ ಇದ್ದಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ತೊಗಾಡಿಯಾ ಹೇಳಿದ್ದಾರೆ. ಇದೇ ವೇಳೆ ಕಾಶಿ ವಿಶ್ವನಾಥ ದೇವಾಲಯ, ಮಥುರಾದಲ್ಲಿರುವ ಕೃಷ್ಣಜನ್ಮಭೂಮಿ, ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಲು ಕಾನೂನು ಜಾರಿಗೊಳಿಸಬೇಕೆಂದು ತೊಗಾಡಿಯಾ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com