ತಾಜ್ ಮಹಲ್ ನ್ನು ಧ್ವಂಸ ಮಾಡಲು ಯೋಗಿ ಆದಿತ್ಯನಾಥ್ ಜೊತೆ ಹೋಗುತ್ತೇನೆ: ಆಜಂ ಖಾನ್

ವ್ಯಂಗ್ಯಭರಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಮಾಜಿ ಸಚಿವ ಆಜಂ ಖಾನ್, ಈಗ ಮತ್ತೊಂದು ಅಂತಹದ್ದೇ ಹೇಳಿಕೆ ನೀಡಿದ್ದಾರೆ.
ತಾಜ್ ಮಹಲ್ ನ್ನು ಧ್ವಂಸ ಮಾಡಲು ಯೋಗಿ ಆದಿತ್ಯನಾಥ್ ಜೊತೆ ಹೋಗುತ್ತೇನೆ: ಆಜಂ ಖಾನ್
ತಾಜ್ ಮಹಲ್ ನ್ನು ಧ್ವಂಸ ಮಾಡಲು ಯೋಗಿ ಆದಿತ್ಯನಾಥ್ ಜೊತೆ ಹೋಗುತ್ತೇನೆ: ಆಜಂ ಖಾನ್
Updated on
ವ್ಯಂಗ್ಯಭರಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಮಾಜಿ ಸಚಿವ ಆಜಂ ಖಾನ್,  ಈಗ ಮತ್ತೊಂದು ಅಂತಹದ್ದೇ ಹೇಳಿಕೆ ನೀಡಿದ್ದಾರೆ. 
ವಿಶ್ವವಿಖ್ಯಾತ ತಾಜ್ ಮಹಲ್ ಬಗ್ಗೆ ಮಾತನಾಡಿರುವ ಆಜಂ ಖಾನ್, ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲ್ ನ್ನು ಶಿವ ಮಂದಿರ ಎಂಬ ಬಗ್ಗೆ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ. "ತಾಜ್ ಮಹಲ್ ನ್ನು ಶಿವ ಮಂದಿರ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಮುಂದಾಳತ್ವ ವಹಿಸಿದರೆ ನಾನೂ ಅವರೊಂದಿಗೆ ತೆರಳಿ ತಾಜ್ ಮಹಲ್ ನ್ನು ಧ್ವಂಸ ಮಾಡುವ ಕೆಲಸದಲ್ಲಿ ಜೊತೆಯಾಗುತ್ತೇನೆ ಎಂದು ಹೇಳಿದ್ದಾರೆ. 
ಶಿವ ಮಂದಿರ ಶಿವಮಂದಿರವಾಗಲು ನಾನು ಮುಸ್ಲಿಮನಾಗಿದ್ದರೂ 20,000 ಜನರೊಂದಿಗೆ ಯೋಗಿ ಆದಿತ್ಯನಾಥ್ ಅವರ ಜೊತೆ ತೆರಳಿ ತಾಜ್ ಮಹಲ್ ನ್ನು ಧ್ವಂಸ ಮಾಡಲು ಸಿದ್ಧನಿದ್ದೇನೆ, ಈ ಕಾರ್ಯಕ್ಕೆ ಯೋಗಿ ಆದಿತ್ಯನಾಥ್ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 
ತಾಜ್ ಮಹಲ್ ನ್ನು ಧ್ವಂಸ ಮಾಡುವುದಕ್ಕೆ ಮೊದಲ ಹೊಡೆತ ಯೋಗಿ ಆದಿತ್ಯನಾಥ್ ಅವರದ್ದಾಗಿರಬೇಕು, ಎರಡನೆಯದ್ದು ನನ್ನದಾಗಿರುತ್ತದೆ, ತಾಜ್ ಮಹಲ್ ನ್ನು ಧ್ವಂಸ ಮಾಡಬೇಕು ಎಂದು ಆಜಂ ಖಾನ್ ಮಾಧ್ಯಮಗಳಿಗೆ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com