ಫರ್ಜಿಕಲ್ (ನಕಲಿ) ಸ್ಟ್ರೈಕ್ ಹೇಳಿಕೆ ಕುರಿತು ಶೌರಿ ಸ್ಪಷ್ಟನೆ

ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನ್ನು ಫರ್ಜಿಕಲ್ (ನಕಲಿ) ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಸ್ಪಷ್ಟನೆ ನೀಡಿದ್ದಾರೆ.
ಫರ್ಜಿಕಲ್ (ನಕಲಿ) ಸ್ಟ್ರೈಕ್ ಹೇಳಿಕೆ ಕುರಿತು ಶೌರಿ ಸ್ಪಷ್ಟನೆ
ಫರ್ಜಿಕಲ್ (ನಕಲಿ) ಸ್ಟ್ರೈಕ್ ಹೇಳಿಕೆ ಕುರಿತು ಶೌರಿ ಸ್ಪಷ್ಟನೆ
ನವದೆಹಲಿ: ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನ್ನು ಫರ್ಜಿಕಲ್ (ನಕಲಿ) ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಸ್ಪಷ್ಟನೆ ನೀಡಿದ್ದಾರೆ. 
ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನ್ನು ಫರ್ಜಿಕಲ್ (ನಕಲಿ) ಸ್ಟ್ರೈಕ್ ಎಂದು ಹೇಳಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಂತರವೂ ಕಾಶ್ಮೀರದ ಪರಿಸ್ಥಿತಿಯಲ್ಲಿ ವಾಸ್ತವವಾಗಿ ಮಹತ್ತರ ಬದಲಾವಣೆಗಳು ನಡೆದಿಲ್ಲ ಎಂದು ಇದೇ ವೇಳೆ ಶೌರಿ ಅಭಿಪ್ರಾಯಪಟ್ಟಿದ್ದಾರೆ. 
ಎಎನ್ಐ ಗೆ ನೀಡಿರುವ ಚುಟುಕು ಸಂದರ್ಶನದಲ್ಲಿ ಅರುಣ್ ಶೌರಿ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದು, "ನಾನು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಎಂದಿಗೂ ಅನುಮಾನ ಹೊಂದಿಲ್ಲ.  ಆದರೆ ಸರ್ಜಿಕಲ್ ಸ್ಟ್ರೈಕ್ ನ್ನೇ ಮುಂದಿಟ್ಟುಕೊಂಡು ನನ್ನ ಎದೆ 56 ಇಂಚಿನದ್ದು, ನಾನು ಪಾಕಿಸ್ತಾನಕ್ಕೆ ತಕ್ಕ  ಪಾಠ ಕಲಿಸಿದ್ದೆ ಎನ್ನುವುದು ತಪ್ಪು ಎಂದು ಅರುಣ್ ಶೌರಿ ಹೇಳಿದ್ದಾರೆ. 
ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೌಸಲಾಗಿದೆ. ಸೇನೆ ನಡೆಸಿದ ಕಾರ್ಯಾಚರಣೆಯನ್ನು ನಾನು ಅನುಮಾನಿಸಲಿಲ್ಲ. ಫರ್ಜಿಕಲ್ ಎಂದರೆ ಸೇನಾ ಕಾರ್ಯಾಚರಣೆಯನ್ನು ಉತ್ಪ್ರೇಕ್ಷೆಗೊಳಿಸುವುದು ಎಂಬ ಅರ್ಥದಲ್ಲಿ ಹೇಳಿದ್ದೆ ಎಂದು ಶೌರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com