ಲಕ್ಷದ್ವೀಪ: ಬಾರತೀಯ ಪಡೆಗಳಿಂದ ಗಾಯಗೊಂಡಿದ್ದ ಶ್ರೀಲಂಕಾ ಮೀನುಗಾರರ ರಕ್ಷಣೆ

ಮೀನುಗಾರಿಕೆ ಹಡಗಿನಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದ ಶ್ರೀಲಂಕಾ ಮೂಲದ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಪಾರು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ಲಕ್ಷದ್ವೀಪ: ಬಾರತೀಯ ಪಡೆಗಳಿಂದ ಗಾಯಗೊಂಡಿದ್ದ ಶ್ರೀಲಂಕಾ ಮೀನುಗಾರರ ರಕ್ಷಣೆ
ಲಕ್ಷದ್ವೀಪ: ಬಾರತೀಯ ಪಡೆಗಳಿಂದ ಗಾಯಗೊಂಡಿದ್ದ ಶ್ರೀಲಂಕಾ ಮೀನುಗಾರರ ರಕ್ಷಣೆ
ನವದೆಹಲಿ: ಮೀನುಗಾರಿಕೆ ಹಡಗಿನಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದ ಶ್ರೀಲಂಕಾ ಮೂಲದ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಪಾರು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ಕೊಲಂಬೋದ ಸಾಗರ ರಕ್ಷಣೆ  ಕೇಂದ್ರ ಲಕ್ಷದ್ವೀಪ ಬಳಿಯಲ್ಲಿ ಹಡಗಿನಲ್ಲಿದ್ದು ಅಪಾಯಕ್ಕೆ ಸಿಲುಕಿದ್ದ  ತನ್ನ ಮೀನುಗಾರರನ್ನು ರಕ್ಷಿಸುವಂತೆ ಭಾರತೀಯ ಕರಾವಳಿ ರಕ್ಷಣಾ ಪಡೆಗಳಿಗೆ ಮನವಿ ಸಲ್ಲಿಸಿತ್ತು. ಐದು ಸಿಬ್ಬಂದಿಗಳನ್ನು ಹೊಂದಿದ್ದ ಈ ಹಡಗು ಫೆ.14ರಂದು ದ್ವೀಪರಾಷ್ಟ್ರದಿಂದ ಹೊರಟಿತ್ತು.
ಹಡಗಿನ ಓರ್ವ ಸಿಬ್ಬಂದಿಯಾದ ಎಂಪಿ ಸುನೀಲ್ ಶಾಂತಾ(47) ಅವರ ಕತ್ತಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಹೇಳಿಕೆ ತಿಳಿಸಿದ್ದು  ಸಧ್ಯ ಇದೀಗ ಭಾರತೀಯ ರಕ್ಷಣಾ ಪಡೆ ಹಡಗಿನಲ್ಲಿ ಗಾಯಗೊಂಡಿರುವ ಮೀನುಗಾಗ್ರರಿಗೆ ಪ್ರಾಥಮಿಕ ಅಗತ್ಯ ಚಿಕಿತ್ಸೆಗಳನ್ನು ಒದಗಿಸುತ್ತಿದೆ.
ಮೀನುಗಾರರ ಆರೋಗ್ಯ ಸ್ಥಿರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಚ್ಚಿನ್ ಗೆ ಕರೆದೊಯ್ಯಲಾಗುತ್ತದೆ. ಮಾ.3ಕ್ಕೆ ಹಡಗು ಕೊಚ್ಚಿನ್ ತಲುಪಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com