ಪಿಎನ್ ಬಿ ಪ್ರಕರಣ: ನೀರವ್ ಮೋದಿಗೆ, ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರೆಂಟ್

12 ಸಾವಿರ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನೀರವ್ ಮೋದಿಗೆ ಹಾಗೂ ಮೆಹುಲ್ ಚೋಕ್ಸಿ ಗೆ ಜಾಮೀನು ರಹಿತ
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
ಮುಂಬೈ: 12 ಸಾವಿರ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನೀರವ್ ಮೋದಿಗೆ ಹಾಗೂ ಮೆಹುಲ್ ಚೋಕ್ಸಿ ಗೆ ಜಾಮೀನು ರಹಿತ ವಾರೆಂಟ್ ನ್ನು ಜಾರಿ ಮಾಡಿದೆ. 
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾಮೀನು ರಹಿತ ವಾರೆಂಟ್ ನ್ನು ಜಾರಿ ಮಾಡಿದೆ. ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ಮೋದಿ ಹಾಗೂ ಚೊಕ್ಸಿಗೆ ಸಮನ್ಸ್ ಜಾರಿಗೊಳಿಸಿತ್ತು, ಇಬ್ಬರೂ ಹಗರಣದ ಪ್ರಮುಖ ಆರೋಪಿಯಾಗಿದ್ದು,  ಸಮನ್ಸ್ ಜಾರಿಯ ಹೊರತಾಗಿಯೂ ಸಿಬಿಐ ಇಡಿ ಎದುರು ಹಾಜರಾಗಿರಲಿಲ್ಲ. 
ಇದಾದ ಬಳಿಕ ಫೆ.27 ರಂದು ಇಡಿ ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿ ಮಾಡಬೇಕೆಂದು ಕೋರ್ಟ್ ಮೆಟ್ಟಿಲೇರಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com