ನೀಫಿಯು ರಿಯೊಗೆ ಬಹುಮತವಿದೆ, ಸರ್ಕಾರ ರಚನೆ ಮಾಡಬಹುದು: ನಾಗಾಲ್ಯಾಂಡ್ ರಾಜ್ಯಪಾಲ ಪಿಬಿ ಆಚಾರ್ಯ

ರಾಷ್ಟ್ರೀಯತಾವಾದಿ ಪ್ರಜಾಪ್ರಭುತ್ವ ಪ್ರಗತಿಪರ ಪಕ್ಷ (ಎನ್‌ಡಿಪಿಪಿ) ಮುಖ್ಯಸ್ಥ ನೀಫಿಯು ರಿಯೊ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಹೊಂದಿದ್ದಾರೆ. ಅವರು ಸರ್ಕಾರ ರಚನೆ ಮಾಡಬಹುದು ಎಂದು ......
ನೀಫಿಯು ರಿಯೊ
ನೀಫಿಯು ರಿಯೊ
ಕೊಹಿಮಾ(ನಾಗಾಲ್ಯಾಂಡ್): ರಾಷ್ಟ್ರೀಯತಾವಾದಿ ಪ್ರಜಾಪ್ರಭುತ್ವ ಪ್ರಗತಿಪರ ಪಕ್ಷ (ಎನ್‌ಡಿಪಿಪಿ) ಮುಖ್ಯಸ್ಥ ನೀಫಿಯು ರಿಯೊ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಹೊಂದಿದ್ದಾರೆ. ಅವರು ಸರ್ಕಾರ ರಚನೆ ಮಾಡಬಹುದು ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ. ಬಿ. ಆಚಾರ್ಯ ಹೇಳಿದ್ದಾರೆ. ಒಟ್ಟು 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಶಾಸಕರ ಬೆಂಬಲವನ್ನು ಅವರು ಹೊಂದಿದ್ದಾರೆಂದು ರಾಜ್ಯಪಾಲರು ತಿಳಿಸಿದರು.
ನಾಳೆಯೊಳಗೆ ರಿಯೊ ಅವರನ್ನು ಬೆಂಬಲಿಸಿರುವ 32 ಶಾಸಕರ ಸಹಿಗಳಿರುವ ಪತ್ರಗಳನ್ನು ಒಪ್ಪಿಸಬೇಕೆಂದು ರಾಜ್ಯಪಾಲ  ಆಚಾರ್ಯ ಹೇಳಿದರು.ಬಿಜೆಪಿಯ ಮಿತ್ರಪಕ್ಷವಾಗಿರುವ ಎನ್‌ಡಿಪಿಪಿ ಮುಖ್ಯಸ್ಥ ನೀಫಿಯು ರಿಯೊ ರಾಜ್ಯಪಾಲರೊಡನೆ ನಡೆಸಿದ ಸಭೆಯ ಬಳಿಕ ರಾಜ್ಯಪಾಲರು ಈ ಹೇಳಿಕೆ ನಿಡಿದ್ದಾರೆ.
ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಪಿಪಿ ಕ್ರಮವಾಗಿ 12 ಹಾಗೂ 18  ಸ್ಥಾನಗಳನ್ನು ಗಳಿಸಿದೆ. ಇನ್ನು ಜೆಡಿ (ಯು) ಪಕ್ಷದ ಏಕೈಕ ಶಾಸಕ ಕೈತೋ ಅಯೆ ಹಾಗೂ ಪಕ್ಷೇತರ ಸ್ವತಂತ್ರ ಶಾಸಕ ತಂಗ್ವಾಂಗ್ ಒಜುಕುಮ್ ಅವರುಗಳು ಸಹ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಎನ್‌ಡಿಪಿಪಿ ಪಕ್ಷದ ಕಾರ್ಯದರ್ಶಿ ಅಬು ಮೆಥಾ ಹೇಳಿದರು.
ಎನ್‌ಡಿಪಿಪಿ ಅಧ್ಯಕ್ಷ ಚೆಂಗ್ವಾಂಗ್ ಕೋನ್ಯಾಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಸಾಸ್ಸಿಲಿ ಲೌಂಗು, ಜೆಡಿ (ಯು) ಶಾಸಕ ಹಾಗೂ ಪಕ್ಷೇತರ ಶಾಸಕರನ್ನು ಒಳಗೊಂಡು ರಿಯೊ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದರು.
ರಿಯೊ ಈ ಹಿಂದೆ ಮೂರು ಬಾರಿ ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com