ಉಪರಾಷ್ಟ್ರಪತಿ, ರಾಷ್ಟ್ರಪತಿಗಳ ವಾಹನಗಳಿಗೆ ಶೀಘ್ರವೇ ನಂಬರ್ ಪ್ಲೇಟ್: ದೆಹಲಿ ಕೋರ್ಟ್ ಗೆ ಮಾಹಿತಿ

ರಾಷ್ತ್ರಪತಿ, ಉಪರಾಷ್ಟ್ರಪತಿಗಳ ವಾಹನಗಳಲ್ಲಿ ಇನ್ನು ಮುಂದೆ ನೋಂದಣಿ ಸಂಖ್ಯೆಯಿರುವ ನಂಬರ್ ಪ್ಲೇಟ್ ನ್ನು ಪ್ರದರ್ಶಿಸಲಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಗೆ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ
ಉಪರಾಷ್ಟ್ರಪತಿ, ರಾಷ್ಟ್ರಪತಿಗಳ ವಾಹನಗಳಿಗೆ ಶೀಘ್ರವೇ ನಂಬರ್ ಪ್ಲೇಟ್: ದೆಹಲಿ ಕೋರ್ಟ್ ಗೆ ಮಾಹಿತಿ
ಉಪರಾಷ್ಟ್ರಪತಿ, ರಾಷ್ಟ್ರಪತಿಗಳ ವಾಹನಗಳಿಗೆ ಶೀಘ್ರವೇ ನಂಬರ್ ಪ್ಲೇಟ್: ದೆಹಲಿ ಕೋರ್ಟ್ ಗೆ ಮಾಹಿತಿ
ನವದೆಹಲಿ: ರಾಷ್ತ್ರಪತಿ, ಉಪರಾಷ್ಟ್ರಪತಿಗಳ ವಾಹನಗಳಲ್ಲಿ ಇನ್ನು ಮುಂದೆ ನೋಂದಣಿ ಸಂಖ್ಯೆಯಿರುವ ನಂಬರ್ ಪ್ಲೇಟ್ ನ್ನು ಪ್ರದರ್ಶಿಸಲಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಗೆ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ. 
ಹಂಗಾಮಿ ನ್ಯಾ. ಗೀತಾ ಮಿತ್ತಲ್ ಹಾಗೂ ಸಿಹರಿ ಶಂಕರ್ ವಿಭಾಗೀಯ ಪೀಠಕ್ಕೆ ಸಚಿವಾಲಯ ಮಾಹಿತಿ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ವಾಹನಗಳನ್ನು ನೋಂದಣಿ ಮಾಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ. 
ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಲೆಫ್ಟಿನೆಂಟ್ ಗೌರ್ನರ್ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಬಳಕೆ ಮಾಡುವ ವಾಹನಗಳನ್ನು ನೋಂದಣಿ ಮಾಡಿಸಿ ನಿಯಮದಂತೆಯೇ ನಂಬರ್ ಪ್ಲೇಟ್ ನ್ನು ಪ್ರದರ್ಶಿಸುವಂತೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. 
ಕೇಂದ್ರ ಸರ್ಕಾರದ ಪರವಾಗಿ ರಾಜೇಶ್ ಗೋಗ್ನಾ ಪ್ರಮಾಣಪತ್ರ ಸಲ್ಲಿಸಿದ್ದು,  ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಬಳಕೆ ಮಾಡುತ್ತಿರುವ 14 ವಾಹನಗಳ ನೋಂದಣಿ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com