ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!

ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ.
ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!
ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!
ಭೋಪಾಲ್: ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ. 
ಬಿಜೆಪಿಯಿಂದ 5 ಬಾರಿ ಸಂಸತ್ ಗೆ ಆಯ್ಕೆಯಾಗಿದ್ದ ಮಾಜಿ ಕೇಂದ್ರ ಆರೋಗ್ಯ ಸಚಿವ ಸರ್ತಾಜ್ ಸಿಂಗ್ ಗೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕೇಳಲಾಗಿದ್ದು, ಈ ವಿಷಯವನ್ನು ಸ್ವತಃ ಮಾಜಿ ಸಚಿವರೇ ಬಹಿರಂಗಪಡಿಸಿದ್ದಾರೆ. 
"ಇತ್ತೀಚೆಗಷ್ಟೇ ನಾನು ಐಸಿಯು ನಲ್ಲಿ ಚಿಕಿತ್ಸೆ ಪಡೆದಿದ್ದೆ, 5 ಲಕ್ಷ ರೂ ವೆಚ್ಚದ ಆಸ್ಪತ್ರೆಯ ಬಿಲ್ ನ ರಿಯಂಬರ್ಸ್‌ಮೆಂಟ್ ಪಡೆಯುವುದಕ್ಕೆ ಅಗತ್ಯವಿದ್ದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೋದಾಗ ಕಡತ ಪ್ರಕ್ರಿಯೆ ಪೂರ್ಣಗೊಳಿಸಲು ಆಸ್ಪತ್ರೆಯ ಸಿಬ್ಬಂದಿಗಳು ಕಮಿಷನ್ ಕೇಳಿದ್ದಾರೆ, ಸಂಸದನಾಗಿರುವ ನನಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಸ್ಥಿತಿಯೇನು ಎಂದು ಮಾಜಿ ಆರೋಗ್ಯ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. 
ಇಂದಿನ ದಿನಗಳಲ್ಲಿ ರಾಜಕೀಯ ಅತ್ಯಂತ ಶೋಚನೀಯ ಸ್ಥಿತಿ ತಲುಪಿದೆ ಎಂದು  ಸಚಿವ ಸರ್ತಾಜ್ ಸಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com