3,200 ಕೋಟಿ ರು. ಟಿಡಿಎಸ್ ಹಗರಣ ಬಯಲಿಗೆಳೆದ ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆ ಬರೊಬ್ಬರಿ 3,200 ಕೋಟಿ ರುಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಆದಾಯ ತೆರಿಗೆ ಇಲಾಖೆ ಬರೊಬ್ಬರಿ 3,200 ಕೋಟಿ ರುಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ.
447 ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಿಂದ ಟಿಡಿಎಸ್ ಕಡಿತಗೊಳಿಸಿದ್ದವು, ಆದರೆ ಆ ಹಣವನ್ನು ಐಟಿ ಇಲಾಖೆಯಲ್ಲಿ ಠೇವಣಿ ಇಡದೆ ತಮ್ಮ ವ್ಯವಹಾರಕ್ಕೆ ಬಳಸಿಕೊಂಡಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.
ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ಘಟಕ ಈ 447 ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದು, ಕೆಲವು ಕಂಪನಿಗಳಿಗೆ ವಾರಂಟ್ ಜಾರಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಆರೋಪ ಸಾಬೀತಾದರೆ 3ರಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ವರದಿ ವಿವರಿಸಿದೆ. ಸೆಕ್ಷನ್‌ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದೆ.
ಈ ಹಗರಣದಲ್ಲಿ ರಾಜಕೀಯ ನಂಟು ಹೊಂದಿರುವ, ಪ್ರಭಾವಶಾಲಿ ಬಿಲ್ಡರ್ ವೊಬ್ಬ ಸೇರಿದ್ದು, ಆತ ಉದ್ಯೋಗಿಗಳಿಂದ ಕಡಿತಗೊಳಿಸಿದ್ದ ಸುಮಾರು 100 ಕೋಟಿ ರೂ. ಟಿಡಿಎಸ್ ಹಣವನ್ನು ತನ್ನ ಸ್ವಂತ ವ್ಯವಹಾರಕ್ಕೆ ಬಳಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com