ಅಕ್ರಮ ಹಣ ವರ್ಗಾವಣೆ ಪ್ರಕರಣ: ಆರ್​ಜೆಡಿ ಸಂಸದೆ ಮಿಸಾ ಭಾರ್ತಿ ಹಾಗೂ ಪತಿಗೆ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್​ಜೆಡಿ ಸಂಸದೆ ಮಿಸಾ ಭಾರ್ತಿ, ಪತಿಗೆ ದೆಹಲಿ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಜಾಮೀನು ನೀಡಿದೆ...
ಲಾಲೂ ಪುತ್ರಿ ಮಿಸಾ ಭಾರ್ತಿ
ಲಾಲೂ ಪುತ್ರಿ ಮಿಸಾ ಭಾರ್ತಿ
ನವದೆಹಲಿ:  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್​ಜೆಡಿ ಸಂಸದೆ ಮಿಸಾ ಭಾರ್ತಿ, ಪತಿಗೆ ದೆಹಲಿ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಜಾಮೀನು ನೀಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಆರ್​ಜೆಡಿ ಸಂಸದೆ ಮಿಸಾ ಭಾರ್ತಿ ಮತ್ತು ಅವರ ಪತಿಗೆ ದೆಹಲಿಯ ಪಾಟಿಯಾಲದ ಸಿಬಿಐ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕೋರ್ಟ್​ ಅನುಮತಿ ಪಡೆಯದೆ ದೇಶ ತೊರೆಯದಂತೆ ಹಾಗೂ ತಲಾ 2 ಲಕ್ಷ ರೂ ಸ್ಯೂರಿಟಿ ನೀಡುವಂತೆ ಆದೇಶಿಸಿ ಜಾಮೀನು ನೀಡಲಾಗಿದೆ. ಈ ಮೂಲಕ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ಜಾಮೀನು ನೀಡದಂತೆ ಜಾರಿ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸಿತ್ತು.
ಇಂತಹ ಹುದ್ದೆಯಲ್ಲಿರುವ ವ್ಯಕ್ತಿಗಳು ಅಂಥಹ ಚಟುವಟಿಕೆ ಮಾಡಿ ದೇಶ ವಿರೋಧಿ ಕೆಲಸ ಮಾಡುತ್ತಾರೆ ಎಂದು ಇಡಿ ಪರ ವಕೀಲ ಅತುಲ್ ತ್ರಿಪಾಠಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com