

ಮುಂಬೈ: ವಾಣಿಜ್ಯನಗರಿ ಮುಂಬೈಯ ಮಲ್ವಾನಿಯಲ್ಲಿನ ಕಟ್ಟಡವೊಂದರ 16 ನೇ ಮಹಡಿಯಿಂದ ಜಿಗಿದು ಟಿವಿ ಧಾರಾವಾಹಿಯೊಂದರ ನಿರ್ಮಾಪಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಇಸ್ಕ್ ಬಾಜ್ ಟಿವಿ ಧಾರಾವಾಹಿಯ ನಿರ್ಮಾಪಕ ಸಂಜಯ್ ಬಾಯ್ ರಾಗಿ ಆತ್ಮಹತ್ಯೆ ಮಾಡಿಕೊಂಡವರು. ವೈಯಕ್ತಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಮೊದಲು ಶಂಕಿಸಿದ್ದರು. ಆದರೆ, ಡೆತ್ ನೋಟ್ ದೊರೆತ ಬಳಿಕ ಅದು ಆತ್ಮಹತ್ಯೆ ಎಂಬುದು ದೃಢಪಟ್ಟಿದೆ.