2017 ರ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕುಗಳಿಂದ 81,683 ಕೋಟಿ ರೂ ವಸೂಲಾಗದ ಸಾಲ- ಅರುಣ್ ಜೇಟ್ಲಿ

2016-17 ನೇ ಸಾಲಿನ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕ್ ಗಳಲ್ಲಿನ ವಸೂಲಾಗದ ಸಾಲದ ಮೊತ್ತ 81,683 ಕೋಟಿ ರೂ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ಇಂದು ತಿಳಿಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on

ದೆಹಲಿ: 2016-17 ನೇ ಸಾಲಿನ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕ್ ಗಳಲ್ಲಿನ ವಸೂಲಾಗದ ಸಾಲದ  ಮೊತ್ತ 81,683 ಕೋಟಿ ರೂ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ಇಂದು ತಿಳಿಸಿದ್ದಾರೆ.

ಇಂತಹ ಸಾಲ ಪಡೆದವರು ಸಾಲ ಮರುಪಾವತಿ ಮಾಡಲು ಹೊಣೆಗಾರರಾಗಿರುತ್ತಾರೆ ಎಂದು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2016-17ರ ಆರ್ಥಿಕ ವರ್ಷದಲ್ಲಿ  ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 20, 339 ಕೋಟಿ ಸೇರಿದಂತೆ ಸಾರ್ವಜನಿಕ ಬ್ಯಾಂಕುಗಳಿಂದ ಒಟ್ಟು 81,683 ಕೋಟಿ ರೂ ವಸೂಲಾಗದ ಸಾಲ ಇರುವುದಾಗಿ  ಹೇಳಿದ್ದಾರೆ.

2017ರ ಸೆಪ್ಟೆಂಬರ್ ನಿಂದ 2018 ರವರೆಗೂ  ರಾಷ್ಟ್ರೀಯ ಬ್ಯಾಂಕುಗಳಿಂದ 28, 781 ಕೋಟಿ ವಸೂಲಾಗದ ಸಾಲವಿದೆ.ಆರ್ ಬಿಐ ಮಾರ್ಗಸೂತ್ರ ಹಾಗೂ ಬ್ಯಾಂಕ್  ಮಂಡಳಿಯ ಒಕ್ಕೂಟದಂತೆ ಪ್ರದರ್ಶನಗೊಳ್ಳದ ಸಾಲಗಳಿಗೆ ನಾಲ್ಕು ವರ್ಷಗಳ ಕಾಲ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಲೋಕ ಅದಾಲತ್, ಸಾಲ ವಸೂಲಿ ನ್ಯಾಯಾಧೀಕರಣ, ಭದ್ರತೆ ಹಿತರಕ್ಷಣೆ ಕಾಯ್ದೆ ಜಾರಿ ಸೇರಿದಂತೆ  ಅನೇಕ ಕಾನೂನಾತ್ಮಕ ಪ್ರಕಿಯೆಗಳಿಂದ ವಸೂಲಾಗದ ಸಾಲವನ್ನು ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಸಾಲಗಾರರಿಗೆ ಇದು ಅನುಕೂಲವಾಗುವುದಿಲ್ಲ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com