ಹರಿಯಾಣ ಕಾಂಗ್ರೆಸ್ ಶಾಸಕರಿಂದ ಪಕೋಡ ಮಾರಾಟ, ಖರೀದಿಸಿದ ಸಿಎಂ ಖಟ್ಟರ್

ಹರಿಯಾಣ ಕಾಂಗ್ರೆಸ್ ಶಾಸಕರು ಮಂಗಳವಾರ ರಾಜ್ಯದಲ್ಲಿನ ನಿರುದ್ಯೋಗ ಖಂಡಿಸಿ ವಿಧಾನಸಭೆ ಹೊರಗಡೆ ಪಕೋಡ ಮಾರಾಟ ...
ಪಕೋಡ ಖರೀದಿಸುತ್ತಿರುವ ಖಟ್ಟರ್
ಪಕೋಡ ಖರೀದಿಸುತ್ತಿರುವ ಖಟ್ಟರ್
Updated on: 
ಚಂಡೀಗಢ: ಹರಿಯಾಣ ಕಾಂಗ್ರೆಸ್ ಶಾಸಕರು ಮಂಗಳವಾರ ರಾಜ್ಯದಲ್ಲಿನ ನಿರುದ್ಯೋಗ ಖಂಡಿಸಿ ವಿಧಾನಸಭೆ ಹೊರಗಡೆ ಪಕೋಡ ಮಾರಾಟ ಮಾಡಿದರು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅವರಿಂದ ಪಕೋಡ ಖರೀದಿಸುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕಿರಣ್ ಚೌಧರಿ ಅವರು, ಮೋದಿಯ ಸಿದ್ಧಾಂತಗಳನ್ನು ಮಾರಾಟ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಶಾಸಕರು ವಿಧಾನಭೆವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಶಾಸಕಿ ಶಕುಂತಲಾ ಖಟಕ್ ಅವರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದರು ಎಂದು ಸಹ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕೇಂದ್ ಮತ್ತು ರಾಜ್ಯ ಸರ್ಕಾರ ಎರಡೂ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದವು. ಆದರೆ ಈಗ ಪಕೋಡ ಉದ್ಯೋಗದ ಭರವಸೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com