ಭಾರತದ ಮಹಾನ್ ವಾಸ್ತುಶಿಲ್ಪತಜ್ಞ ಬಾಲಕೃಷ್ಣ ದೋಶಿಗೆ ವಾಸ್ತುಶಿಲ್ಪ ನೋಬೆಲ್ ಪುರಸ್ಕಾರ

ಹಲವಾರು ಸಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದ ಬಾರತದ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಅವರಿಗೆ ವಾಸ್ತು ಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ ಲಭಿಸಿದೆ.
ಬಾಲಕೃಷ್ಣ  ದೋಶಿ
ಬಾಲಕೃಷ್ಣ ದೋಶಿ
ವಾಶಿಂಗ್ ಟನ್: ಹಲವಾರು ಸಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದ ಬಾರತದ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಅವರಿಗೆ ವಾಸ್ತು ಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ ಲಭಿಸಿದೆ.
ವಾಸ್ತುಶಿಲ್ಪ ಕ್ಷೇತ್ರದ ನೊಬೆಲ್ ಎಂದೇ ಕರೆಯಲ್ಪಡುವ ಈ ಪುರಸ್ಕಾರಕ್ಕೆ ಭಾಜನರಾದ ಪ್ರಥಮ ಭಾರತೀಯ ಎನ್ನುವ ಖ್ಯಾತಿ ದೋಶಿ ಅವರಿಗೆ ಸಂದಿದೆ.
"ಬಾಲಕೃಷ್ಣ ದೋಶಿ ಈ ಹಲವಾರು ವರ್ಷಗಳಿಂದ ಗಂಭೀರ ವಾಸ್ತು ರಚನೆಗಳನ್ನು ನಿರ್ಮಾಣ ಮಾಡಿದ್ದಾರೆ. ದೇಶದ ಜನರಿಗೆ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ಸಾರ್ವಜನಿಕ ಸಂಸ್ಥೆಗಳು, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಸರ್ವಶ್ರೇಷ್ಠವಾದ ವಾಸ್ತುಶಿಲ್ಪಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಮಂಡಳಿ ಶ್ಲಾಘಿಸಿದೆ.
ತೊಂಭತ್ತರ ಹರೆಯದ ದೋಶಿ ಮಹಾರಾಷ್ಟ್ರದ ಪುಣೆ ಮೂಲದ ವಾಸ್ತುಶಾಸ್ತ್ರಜ್ಞರಾಗಿದ್ದಾರೆ. ಜೆಫಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ ಹಳೆ ವಿದ್ಯಾರ್ಥಿಯಾಗಿರುವ ದೋಶಿ 1950ರಲ್ಲಿ ಪ್ಯಾರೀಸ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಮಹಾನ್ ವಾಸ್ತುಶಿಲ್ಪಿ ಲೆ ಕೋರ್ಬಷನ್ ಅವರೊಡನೆ ಕೆಲಸ ಮಾಡಿದ ಅನುಭವವಿದ್ದ ದೋಶಿ 1955ರಲ್ಲಿ ಭಾರತದಲ್ಲಿ ವಾಸ್ತು ಶಿಲ್ಪ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಇವರು ಅಹಮದಾಬಾದ್ ನ ಐಐಎಂಬಿ ಕ್ಯಾಂಪಸ್, ಬೆಂಗಳೂರು ಐಐಎಂ, ಲಖನೌ ಐಐಅಎಂ ಕ್ಯಾಂಪಸ್ ಗಳನ್ನು ವಿನ್ಯಾಸಗೊಳಿಸಿದ್ದಾರೆ.
ಇಷ್ಟೇ ಅಲ್ಲದೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಸ್ಷನ್ ಟೆಕ್ನಾಲಜಿ, ಟ್ಯಾಗೂರ್ ಮೆಮೋರಿಯಲ್, ಅಹಮದಾಬಾದ್ ನ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಲಜಿ, ಇಂತಹಾ ನಾನಾ ಸಂಸ್ಥೆಗಳ ಕಟ್ಟಡ, ವಾಸ್ತು ವಿನ್ಯಾಸಗಳನ್ನು ಇವರು ರಚಿಸಿದ್ದಾರೆ.
ಅಗ್ಗದ ಮನೆ ನಿರ್ಮಾಣ ಯೋಜನೆಗಳನ್ನು ಖ್ಯಾತಿ ಸಹ ಇವರದಾಗಿದ್ದು ಅಹಮದಾಬಾದ್ ನ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ. ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಆಂಡ್ ಟೆಕ್ನಾಲಜಿ, ಅಹಮದಾಬಾದ್ ನ ವಿಷುವಲ್ ಆರ್ಟ್ ಸೆಂಟರ್, ಕನೋರಿಯಾ ಕಲಾ ಕೇಂದ್ರ ಹೀಗೆ ನಾನಾ ಸಂಸ್ಥೆಗಳ ಸಂಸ್ಥಾಪಕ ಸದಸ್ಯ, ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com