ನವದೆಹಲಿ: ಭಾರತ-ಚೀನಾ ಗಡಿಯನ್ನು ಕಾಪಾಡುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹುತಾತ್ಮರಾದರೆ ಅಥವಾ ಗಾಯಗೊಳ್ಳುವ ಯೋಧರನ್ನು ಕೇಂದ್ರ ಸರ್ಕಾರ 'ವಿಶೇಷ' ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ. ಆದರೆ ಇದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂಬ ಸೇನೆಯ ದೀರ್ಘಾವಧಿಯ ಬೇಡಿಕೆಯನ್ನು ತಳ್ಳಿಹಾಕಲಾಗಿದೆ.