ಭವಿಷ್ಯದಲ್ಲಿ ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್‌ ಅಧ್ಯಕ್ಷರಾಗಬಹುದು: ಸೋನಿಯಾ

ಭವಿಷ್ಯದಲ್ಲಿ ನೆಹರೂ - ಗಾಂಧಿ ಕುಟುಂಬದ ಹೊರಗಿನವರೂ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು...
ಸೋನಿಯಾ ಗಾಂಧಿ - ರಾಹುಲ್ ಗಾಂಧಿ
ಸೋನಿಯಾ ಗಾಂಧಿ - ರಾಹುಲ್ ಗಾಂಧಿ
Updated on
ನವದೆಹಲಿ: ಭವಿಷ್ಯದಲ್ಲಿ ನೆಹರೂ - ಗಾಂಧಿ ಕುಟುಂಬದ  ಹೊರಗಿನವರೂ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ಯುಪಿಎ ಮುಖ್ಯಸ್ಥೆ ಹಾಗೂ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರರವಾರ ಹೇಳಿದ್ದಾರೆ. 
ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೋನಿಯಾ, ಮುಂದಿನ ದಿನಗಳಲ್ಲಿ ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಹುವ ಅವಕಾಶ ಇದೆ ಎಂದರು.
ಇನ್ನು ಗಾಂಧಿ ನಾಯಕತ್ವವಿಲ್ಲದೆ ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೆ? ಎಂಬ ಪ್ರಶ್ನೆಗೆ ಇದನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೇಳಬೇಕು ಎಂದರು.
ಕಾಂಗ್ರೆಸ್‌ ಅಧ್ಯಕ್ಷರನ್ನು ಪ್ರಜಾಪ್ರಭುತ್ವದಡಿಯಲ್ಲಿಯೇ ಆಯ್ಕೆ ಮಾಡಲಾಗುತ್ತಿದೆ. ಅಮೆರಿಕದಲ್ಲೂ ಕುಟುಂಬ ರಾಜಕಾರಣ ಇದೆ. ಬುಷ್‌, ಕ್ಲಿಂಟನ್‌ ಸೇರಿದಂತೆ ಹಲವರ ಕುಟುಂಬ ಅಮೆರಿಕದಲ್ಲಿ ಆಡಳಿತ ನಡೆಸಿದೆ ಎಂದು ಸೋನಿಯಾ ಗಾಂಧಿ ತಿಳಿಸಿದರು.
2004ರಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಸರ್ಕಾರ ರಚನೆ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರ ಹೆಸರನ್ನು ನಾನೇ ಸೂಚಿಸಿದ್ದೆ. ಆದರೆ ರಿಮೋಟ್‌ ಕಂಟ್ರೋಲ್‌ ನಾನಾಗಿದ್ದೆ ಎಂಬುದು ಸುಳ್ಳು ಎಂದು ಸೋನಿಯಾ ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ನನ್ನ ಇತಿಮಿತಿ ಗೊತ್ತಿದೆ. ಅದನ್ನು ಎಂದಿಗೂ ದಾಟಿಲ್ಲ. ಕಾಂಗ್ರೆಸ್‌ನಿಂದ ಅಂದು ಹಲವರು ಬಿಟ್ಟು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಲು ಚುಕ್ಕಾಣಿ ಹಿಡಿಯಬೇಕಾಯಿತು ಎಂದು ಸೋನಿಯಾ ಹಿಂದಿನ ಘಟನೆಗಳನ್ನು ಸ್ಮರಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com