ಪ್ರತಿಮೆ ವಿವಾದ : ತ್ರಿಪುರಾ ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಾಲಿ ಪ್ರಗತಿಪರ ಚಿಂತಕರ ಆಗ್ರಹ

ಲೆನಿನ್ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಟ್ವೀಟರ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ತ್ರಿಪುರಾ ರಾಜ್ಯಪಾಲ ತಾತಗಥ ರೈ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಾಲಿ ಪ್ರಗತಿಪರ ಚಿಂತಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಶ್ಚಿಮ ಬಂಗಾಳ : ಲೆನಿನ್ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಟ್ವೀಟರ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ತ್ರಿಪುರಾ ರಾಜ್ಯಪಾಲ ತಾತಗಥ ರೈ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಾಲಿ ಪ್ರಗತಿಪರ ಚಿಂತಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದ್ದಾರೆ

ತಾತಗಥ  ರೈ ತನ್ನ ಸಾಂವಿಧಾನಿಕ ಕರ್ತವ್ಯ ಮರೆತು ನೀಡಿರುವ  ಸಂದೇಶ ತ್ರಿಪುರಾ ಸೇರಿದಂತೆ ದೇಶಾದ್ಯಂತ ಪ್ರಚೋದನೆ ಹಬ್ಬಿಸುತ್ತಿದೆ. ಹಿಂಸೆಗೆ ಪ್ರೇರೆಪಿಸುತ್ತಿದೆ  ಎಂದು ಬೆಂಗಾಲಿ ಚಿಂತಕರು ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ಹೆಸರಾಂತ ಬರಹಗಾರರಾದ ಎಸ್, ಮುಖ್ಯೋಪಾಧ್ಯಾಯ, ನಾಬಾನಿತ ದೇಬ್ ಸೇನ್,  ಟಿ.ಎಂ. ಮಿತ್ರಾ, ಚಿತ್ರ ನಿರ್ಮಾಪಕ ಗೌತಮ್ ಘೋಷ್,
ಕವಿ ಜಾಯ್ ಗೋಸ್ವಾಮಿ, ಗಾಯಕ ಸ್ವಾಗತಲಕ್ಷ್ಮಿ ದೇಶಗುಪ್ತ, ಮಾನವ ಹಕ್ಕು ಹೋರಾಟಗಾರ್ತಿ ಸುಜಾತೊ ಬಾದ್ರಾ, ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದು, ತ್ರಿಪುರಾ ರಾಜ್ಯಪಾಲರ ವಿರುದ್ಧ ಕೂಡಲೇ ಸಂವಿಧಾನದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ.

 ತ್ರಿಪುರಾದಲ್ಲಿ 25 ವರ್ಷಗಳ ಎಡಪಕ್ಷಗಳ ಆಳ್ವಿಕೆ ಅಂತ್ಯಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲೆನಿಲ್ ಪ್ರತಿಮೆ ಧ್ವಂಸಗೊಳಿಸಲಾಯಿತು. ಈ ಸಂಬಂಧ ಮಾ.5,6,7 ರಂದು ಸರಣಿ ಟ್ವೀಟ್ ಮಾಡಿದ್ದ ರಾಜ್ಯಪಾಲ ತಾತಗಥ ರೈ,  ತನ್ನನ್ನು ತಾನು ಬಲಪಂಥೀಯ ಹಿಂದೂ ಸಾಮಾಜಿಕ ರಾಜಕೀಯ ಚಿಂತಕ, ಬರಹಗಾರ ಎಂದು ಬಣ್ಣಿಕೊಂಡಿದ್ದರು.

 ಲೆನಿನ್ ಪ್ರತಿಮೆ ಧ್ವಂಸದಿಂದ ತ್ರಿಪುರಾದಲ್ಲಿ ಎಲ್ಲಿಯೂ ಶಾಂತಿ ಕದಡುವುದಿಲ್ಲ ಎಂಬರ್ಥದಲ್ಲಿ ಟ್ವಿಟ್ ಹಾಕಿದ್ದರು, ಇದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com