ಟಿಟಿವಿ ದಿನಕರನ್
ಟಿಟಿವಿ ದಿನಕರನ್

ಮಾರ್ಚ್ 15ರಂದು ಟಿಟಿವಿ ದಿನಕರನ್ ಹೊಸ ಪಕ್ಷದ ಹೆಸರು ಘೋಷಣೆ

ಎಐಎಡಿಎಂಕೆಯ ಎರಡೇಲೆ ಚಿಹ್ನೆಗಾಗಿ ಸರಣಿ ಕಾನೂನು ಹೋರಾಟ ನಡೆಸಿದ ಬಳಿಕ ಈಗ ತಮ್ಮದೇ ಒಂದು ರಾಜಕೀಯ....
Published on
ಚೆನ್ನೈ:  ಎಐಎಡಿಎಂಕೆಯ ಎರಡೇಲೆ ಚಿಹ್ನೆಗಾಗಿ ಸರಣಿ ಕಾನೂನು ಹೋರಾಟ ನಡೆಸಿದ ಬಳಿಕ ಈಗ ತಮ್ಮದೇ ಒಂದು ರಾಜಕೀಯ ಪಕ್ಷ ಘೋಷಿಸುವುದಾಗಿ ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಅವರು ಭಾನುವಾರ ಘೋಷಿಸಿದ್ದಾರೆ,
ದೆಹಲಿ ಹೈಕೋರ್ಟ್ ನಮ್ಮ ಅರ್ಜಿ ಸ್ವೀಕರಿಸಿದ ಹಿನ್ನೆಲಯಲ್ಲಿ ಮಾರ್ಚ್ 15ರಂದು ಮದುರೈ ನ ಮೇಲೂರಿನಲ್ಲಿ ನಮ್ಮ ನೂತನ ಪಕ್ಷದ ಹೆಸರು ಮತ್ತು ಭಾವುಟವನ್ನು ಅನಾವರಣಗೊಳಿಸುವುದಾಗಿ ಟಿಟಿವಿ ದಿನಕರನ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್ ಕಳೆದ ಮಾರ್ಚ್ 9ರಂದು ಟಿಟಿವಿ ದಿನಕರನ್ ಅವರು ಸಾಮಾನ್ಯ ಚಿಹ್ನೆ ಹೊಂದಲು ಅವಕಾಶ ನೀಡಿತ್ತು. ಹೀಗಾಗಿ ಅವರು ಪ್ರೆಸ್ಸರ್ ಕುಕ್ಕರ್ ಅನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ ನವೆಂಬರ್ ನಲ್ಲಿ ಚುನಾವಣಾ ಆಯೋಗ ಎರಡೇಲೆ ಚಿಹ್ನೆಯನ್ನು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರಿಗೆ ನೀಡಿದ್ದನ್ನು ಪ್ರಶ್ನಿಸಿ ದಿನಕರನ್ ಮತ್ತು ವಿಕೆ ಶಶಿಕಲಾ ಬಣ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕಳೆದ ಡಿಸೆಂಬ್ ನಲ್ಲಿ ನಡೆದ ಆರ್ ಕೆ ನಗರ ಉಪ ಚುನಾವಣೆಯಲ್ಲಿ ಪ್ರೆಸ್ಸರ್ ಕುಕ್ಕರ್ ಚಿಹ್ನೆಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಟಿಟಿವಿ ದಿನಕರನ್ ಗೆಲುವು ಸಾಧಿಸಿದ್ದರು.

X

Advertisement

X
Kannada Prabha
www.kannadaprabha.com