ಕಾಶ್ಮೀರ ರಾಜಕೀಯ ಬಗ್ಗೆ ಟೀಕೆ ಮಾಡಿದ್ದ ಸಚಿವರನ್ನು ಸಂಪುಟದಿಂದ ಕೈ ಬಿಟ್ಟ ಮೆಹಬೂಬ ಮುಫ್ತಿ

ಕಾಶ್ಮೀರ ವಿವಾದ ಒಂದು ರಾಜಕೀಯ ವಿಷಯವಲ್ಲ ಎಂದು ದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಹೇಳಿಕೆ ...
ಹಸೀಬ್ ದ್ರಬು -ಮೆಹಬೂಬ ಮುಫ್ತಿ
ಹಸೀಬ್ ದ್ರಬು -ಮೆಹಬೂಬ ಮುಫ್ತಿ

ಶ್ರೀನಗರ: ಕಾಶ್ಮೀರ ವಿವಾದ ಒಂದು ರಾಜಕೀಯ ವಿಷಯವಲ್ಲ ಎಂದು ದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಹಣಕಾಸು ಸಚಿವ ಹಸೀಬ್ ದ್ರಬು ಅವರನ್ನು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಂಪುಟದಿಂದ ಕೈ ಬಿಟ್ಟಿದ್ದಾರೆ.

ಶ್ರೀನಗರದಲ್ಲಿ ಪಿಡಿಪಿ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಮುಖ್ಯಮಂತ್ರಿ ರಾಜ್ಯಪಾಲ ಎನ್.ಎನ್.ವೊಹ್ರ ಅವರಿಗೆ ಪತ್ರ ಬರೆದಿದ್ದು, ಸಚಿವ ಸಂಪುಟದಿಂದ ದ್ರಬು ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಕೋರಿದ್ದಾರೆ ಎನ್ನಲಾಗಿದೆ.

ಕಳೆದ ಶುಕ್ರವಾರ ದೆಹಲಿಯಲ್ಲಿ ಪಿಎಚ್ ಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಮಾರಂಭವೊಂದರಲ್ಲಿ ಮಾತನಾಡಿದ್ದ ದ್ರಬು, ನಾನು ನೋಡಿರುವ ಮಟ್ಟಿಗೆ ಜಮ್ಮು ಕಾಶ್ಮೀರದ ವಿವಾದ ರಾಜಕೀಯ ವಿಷಯವಲ್ಲ. ಕಳೆದ 50ರಿಂದ 70 ವರ್ಷಗಳಲ್ಲಿ ರಾಜಕೀಯದ ಬಗ್ಗೆ ಸುಮ್ಮನೆ ಬೊಗಳುತ್ತಿದ್ದಾರೆ. ಆದರೆ ರಾಜಕೀಯ ಪರಿಸ್ಥಿತಿ ಮಾತ್ರ ಬದಲಾಗಲೇ ಇಲ್ಲ ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com